ಬೇಸಿಗೆ ಅವಧಿಯಲ್ಲಿ ಮುಂಬೈ-ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ

ಹುಬ್ಬಳ್ಳಿ:

   ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಮಧ್ಯ ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ 13 ಟ್ರಿಪ್‌ಗಳ ಬೇಡಿಕೆಯ ಮೇರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಈ ವಿಶೇಷ ರೈಲು ಸೇವೆಗಳ ವಿವರಗಳು ಹೀಗಿವೆ:

   ರೈಲು ಸಂಖ್ಯೆ ೦೧೦೧೩/೦೧೦೧೪ ಸಿಎಸ್‌ಟಿ ಮುಂಬೈ-ಎಸ್‌ಎಂವಿಟಿ ಬೆಂಗಳೂರು-ಸಿಎಸ್‌ಎಂಟಿ ಮುಂಬೈ ವಿಶೇಷ ಎಕ್ಸ್‌ಪ್ರೆಸ್
ರೈಲು ಸಂಖ್ಯೆ ೦೧೦೧೩ ಸಿಎಸ್‌ಟಿ ಮುಂಬೈ – ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ ೫, ೧೨, ೧೯, ೨೬; ಮೇ ೩, ೧೦, ೧೭, ೨೪, ೩೧; ಮತ್ತು ಜೂನ್ ೭, ೧೪, ೨೧, ೨೮ (ಶನಿವಾರ) ರಂದು ಸಿಎಸ್‌ಎಂಟಿ ಮುಂಬೈನಿಂದ ೦೦:೩೦ ಗಂಟೆಗೆ ಹೊರಟು, ಅದೇ ದಿನ ೨೩:೫೫ ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ತಲುಪಲಿದೆ.

   ರೈಲು ಸಂಖ್ಯೆ ೦೧೦೧೪ ಎಸ್‌ಎಂವಿಟಿ ಬೆಂಗಳೂರು – ಸಿಎಸ್‌ಎಂಟಿ ಮುಂಬೈ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ ೬, ೧೩, ೨೦, ೨೭; ಮೇ ೪, ೧೧, ೧೮, ೨೫; ಮತ್ತು ಜೂನ್ ೧, ೮, ೧೫, ೨೨, ೨೯ (ಭಾನುವಾರ) ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ೪:೪೦ ಗಂಟೆಗೆ ಹೊರಟು, ಮರುದಿನ ೦೪:೦೫ ಗಂಟೆಗೆ ಸಿಎಸ್‌ಎಂಟಿ ಮುಂಬೈ ತಲುಪಲಿದೆ.

   ಈ ರೈಲು ಎರಡೂ ದಿಕ್ಕುಗಳಲ್ಲಿ ದಾದರ, ಥಾಣೆ, ಕಲ್ಯಾಣ್, ಲೋನಾವಾಲ, ಪುಣೆ, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಕುಡಚಿ, ರಾಯಬಾಗ್, ಘಟಪ್ರಭಾ, ಬೆಳಗಾವಿ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ ಮತ್ತು ತುಮಕೂರು ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.ಈ ರೈಲಿನಲ್ಲಿ ೨೨ ಬೋಗಿಗಳಿದ್ದು, ಅವುಗಳಲ್ಲಿ ೧-ಎಸಿ ಟು ಟೈರ್, ೫-ಎಸಿ ತ್ರಿ ಟೈರ್, ೧೦-ಸ್ಲೀಪರ್ ಕ್ಲಾಸ್, ೪-ಜನರಲ್ ಸೆಕೆಂಡ್ ಕ್ಲಾಸ್ ಮತ್ತು ೨-ಎಸ್‌ಎಲ್‌ಆರ್‌ಡಿ ಬೋಗಿಗಳು ಸೇರಿವೆ.
ಮುಂಗಡ ಬುಕ್ಕಿಂಗ್ ಮತ್ತು ಆಗಮನ/ನಿರ್ಗಮನ ಸಮಯಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಬಹುದು.

Recent Articles

spot_img

Related Stories

Share via
Copy link