ವಿಶ್ವ ಶಾಂತಿಗಾಗಿ ನವಕಾರ ಮಹಾಮಂತ್ರ ಜಪ – ವಿಡಿಯೋ ಸಂವಾದದ ಮೂಲಕ ಮಂತ್ರ ಪಠಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು:

   ಜಾಗತಿಕ ಜೈನ ಸಮುದಾಯವು ನವಕರ್ ಮಹಾ ದಿವಸ್ ದ ಅಭೂತಪೂರ್ವ ಆಚರಣೆ ನಡೆಯಿತು. ಇಂದು ಬೆಳಗ್ಗೆ 8 ರಿಂದ 9.36ರವರೆಗೆ ನಗರದ ಫ್ರೀಡಂಪಾರ್ಕ್‌ನಲ್ಲಿ ವಿಶ್ವ ಶಾಂತಿಗಾಗಿ ನವಕಾರ ಮಹಾಮಂತ್ರವನ್ನು ಜಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಮುದಾಯದ ಅಧ್ಯಕ್ಷ ರಂಜಿತ್ ಸೋಲಂಕಿ ತಿಳಿಸಿದರು.

   ಭಾರತ ಸಹಿತ ಜಗತ್ತಿನ 108 ದೇಶಗಳಲ್ಲಿ ಈ ಕಾರ್ಯಕ್ರಮ ನಡೆಯಿತು. ಲಕ್ಷಾಂತರ ಜನರು ಭಾಗಿಯಾಗಿದ್ದರು. ನವಕರ್ ಮಹಾ ದಿವಸದ ಕೇಂದ್ರ ಆಚರಣೆಯು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಪ್ರಧಾನಿ ಮೋದಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಮಂತ್ರಪಠಿಸಿದರು.

   ಶಾಂತಿ, ಅಹಿಂಸೆ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಸಂಕೇತಿಸುವ ಪೂಜ್ಯ ಜೈನ ಮಂತ್ರವಾದ ನವಕರ್ ಮಹಾ ಮಂತ್ರದ ಸಾಮೂಹಿಕ ಪಠಣ ಈ ಕಾರ್ಯಕ್ರಮದ ಮೂಲವಾಗಿದೆ. ವಿವಿ ಪುರಂನ ಮಹಾವೀರ ಧರ್ಮಶಾಲಾ, ಭಗವಾನ್ ಮಹಾವೀರ ರಸ್ತೆಯ ಗಣೇಶ್ ಭಾಗ್ ಮತ್ತು ಯಶವಂತಪುರದ ಮೇವಾ‌ರ್ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.