ಸನ್ನಿ ಡಿಯೋಲ್‌ ಸೇರಿ ಖ್ಯಾತ ನಟ ವಿರುದ್ಧ FIR

ಚಂಡೀಗಢ:

      ಬಾಲಿವುಡ್ ನಟರಾದ ಸನ್ನಿ ಡಿಯೋಲ್ ನಟನೆಯ ಬ್ಲಾಕ್‌ ಬಾಸ್ಟರ್‌ ಸಿನಿಮಾ ʻಜಾಟ್‌ʼರಿಲೀಸ್‌  ಆದಾಗಿನಿಂದಲೂ ಸದಾ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಇದೀಗ ಜಾಟ್‌ ಸಿನಿಮಾದ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದ್ದು, ನಟ ಸನ್ನಿ ಡಿಯೋಲ್‌ , ರಣದೀಪ್ ಹೂಡಾ ಮತ್ತು ವಿನೀತ್ ಕುಮಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಜಲಂಧರ್ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಅದರ ನಿರ್ಮಾಪಕರ ವಿರುದ್ಧವೂ ಕೇಸ್‌ ದಾಖಲಿಸಲಾಗಿದೆ. 

    ಏಪ್ರಿಲ್ 10 ರಂದು ಬಿಡುಗಡೆಯಾದ ಜಾಟ್‌ ಸಿನಿಮಾ ಬಾಲಿವುಡ್‌ ಬ್ಲಾಕ್ಸ್‌ ಬಾಸ್ಟರ್‌ ಆಕ್ಷನ್‌ ಸಿನಿಮಾ ಎಂದೆನಿಸಿಕೊಂಡಿದೆ. ಇದೀಗ ಚಿತ್ರದಲ್ಲಿ ಕ್ರಿಶ್ಚಿಯನ್‌ ಧರ್ಮದ ವಿರುದ್ಧ ಅವಹೇಳನಕಾರಿ ದೃಶ್ಯಗಳಿವೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದ ಒಂದು ದೃಶ್ಯವು ಇಡೀ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ದೂರುದಾರರು ಹೇಳಿದ್ದಾರೆ. ಯೇಸುಕ್ರಿಸ್ತನ ಬಗ್ಗೆ ಅಗೌರವ ತೋರಿಸಲಾಗಿದೆ. ಅದೂ ಅಲ್ಲದೇ ಕ್ರಿಶ್ಚಿಯನ್‌ ಧರ್ಮಕ್ಕೆ ಅವಮಾನ ಮಾಡಬೇಕೆಂದೇ ಕ್ರೈಸ್ತರ ಪವಿತ್ರ ಮಾಸವಾದ ಏಪ್ರಿಲ್‌ನಲ್ಲೇ ರಿಲೀಸ್‌ ಮಾಡಿದ್ದಾರೆ. ಇದು ಕ್ರೈಸ್ತ ಮತ ಬಾಂಧವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ಇಡೀ ದೇಶದಲ್ಲಿ ಗಲಭೆಗಳು ಭುಗಿಲೆದ್ದಿವೆ ಮತ್ತು ಅಶಾಂತಿ ಹರಡುತ್ತದೆ” ಎಂದು ದೂರುದಾರರು ಆರೋಪಿಸಿದ್ದಾರೆ. 

    ಸನ್ನಿ ಡಿಯೋಲ್ ಅವರ ಇತ್ತೀಚಿನ ಆಕ್ಷನ್ ಚಿತ್ರ ‘ಜಾತ್’ ನಲ್ಲಿ ರಣದೀಪ್ ಹೂಡಾ ಪ್ರಮುಖ ಖಳನಾಯಕನಾಗಿ ನಟಿಸಿದ್ದಾರೆ, ವಿನೀತ್ ಕುಮಾರ್ ಸಿಂಗ್, ಸಯಾಮಿ ಖೇರ್, ರೆಜಿನಾ ಕ್ಯಾಸಂಡ್ರ, ಪ್ರಶಾಂತ್ ಬಜಾಜ್, ಜರೀನಾ ವಹಾಬ್ ಮತ್ತು ಜಗಪತಿ ಬಾಬು ಸೇರಿದಂತೆ ಪೋಷಕ ಪಾತ್ರವರ್ಗವಿದೆ. “ಡಾನ್ ಸೀನು”, “ಬಾಡಿಗಾರ್ಡ್” ಮತ್ತು “ವೀರ ಸಿಂಹ ರೆಡ್ಡಿ” ನಂತಹ ತೆಲುಗು ಚಿತ್ರಗಳಿಗೆ ಹೆಸರುವಾಸಿಯಾದ ಮಲಿನೇನಿ ಅವರ ಹಿಂದಿ ನಿರ್ದೇಶನದ ಚೊಚ್ಚಲ ಚಿತ್ರವೂ ಇದಾಗಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದು ತನ್ನ ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 32 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿತು. ಇನ್ನು ಈ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿದ್ದಂತೆ ಜಾಟ್‌ 2 ಸಿನಿಮಾವನ್ನೂ ಸನ್ನಿ ಡಿಯೋಲ್‌ ಘೋಷಿಸಿದ್ದಾರೆ.

Recent Articles

spot_img

Related Stories

Share via
Copy link