ರಾಯಚೂರು:
ಕುರಿ ಖರೀದಿಗೆ ಹೊರಟ ಬೊಲೆರೋ ಪಿಕಪ್ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗಿನ ಜಾವ ಘಟನೆ ಜಿಲ್ಲೆ ದೇವದುರ್ಗ ತಾಲ್ಲೂಕಿನ ಅಮರಾಪುರ ಕ್ರಾಸ್ ಬಳಿ ನಡೆದಿದೆ.
ಮೃತರು ನಾಗರಾಜ್, ಸೋಮ, ನಾಗಭೂಷಣ, ಮುರಳಿ ಎಂದು ಗುರುತಿಸಲಾಗಿದೆ. ಮೃತ ನಾಲ್ವರು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಹಿಂದೂಪುರ ಗ್ರಾಮದವರಾಗಿದ್ದಾರೆ. ತೆಲಂಗಾಣದ ಹಿಂದೂಪುರದಿಂದ ಶಹಾಪೂರ ಸಂತೆಯಲ್ಲಿ ಕುರಿಗಳ ಖರೀದಿಗಾಗಿ ಹೊರಟ ಸಂದರ್ಭದಲ್ಲಿ ರ್ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗಬ್ಬೂರು ಪೊಲೀಸರು ಭೇಟಿ ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಾಲಕ ಆನಂದ ಎಂಬುವರು ಗಂಭೀರಗಾಯಗೊಂಡಿದ್ದಾನೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
