ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ? ವ್ಯಕ್ತವಾಯ್ತು ಟೀಕೆ

ಮುಂಬೈ :

   ನಟ ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಅವರು ಹಲವು ರೀತಿಯ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನ್ ಮಾಡುತ್ತಾರೆ. ಅವರು ರೆಸ್ಟೋರೆಂಟ್ ಉದ್ಯಮವನ್ನೂ ನಡೆಸುತ್ತಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ‘ಟೋರಿ’ ಹೆಸರಿನ ರೆಸ್ಟೋರೆಂಟ್ ಹೊಂದಿದ್ದಾರೆ. ಸಾವಿರಾರು ರೂಪಾಯಿ ಬಿಲ್ ಹಾಕುವ ಈ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ ಮಾಡುತ್ತಿರುವ ಆರೋಪ ಎದುರಾಗಿದೆ.

   ಸಾರ್ಥಕ್ ಅವರು ಮೊದಲು ವಿರಾಟ್ ಕೊಹ್ಲಿ ಒಡೆತನದ ಹೋಟೆಲ್​ಗೆ ತೆರಳಿದ್ದಾರೆ. ಆ ಬಳಿಕ ಶಿಲ್ಪಾ ಶೆಟ್ಟಿ, ಬಾಬಿ ಡಿಯೋಲ್ ಒಡೆತನದ ರೆಸ್ಟೋರೆಂಟ್​ಗಳಲ್ಲೂ ಪನ್ನೀರ್​ನ ಪರಿಶೀಲಿಸಿದ್ದಾರೆ. ಇಲ್ಲಿ ಒರಿಜಿನಲ್ ಪನೀರ್ ಸಿಕ್ಕಿದೆ. ಆದರೆ, ಗೌರಿ ಖಾನ್ ಒಡೆತನದ ಟೋರಿ ರೆಸ್ಟೋರೆಂಟ್​ನಲ್ಲಿ ನಕಲಿ ಅಥವಾ ಕಳಪೆ ಗುಣಪಟ್ಟದ ಪನ್ನೀರ್ ಸಿಕ್ಕಿದೆ. ಏಕೆಂದರೆ ಪನ್ನೀರ್ ಮೇಲೆ ಆಯೋಡಿನ್ ಟಿಂಚರ್ ಹಾಕುತ್ತಿದ್ದಂತೆ ಅದು ಬಣ್ಣ ಬದಲಿಸಿದೆ. ‘ಅಯೋಡಿನ್ ಪರೀಕ್ಷೆಯು ಪನೀರ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಅವರಿಗೆ ನೀಡಿದ ಆಹಾರವು ಸೋಯಾ ಆಧಾರಿತ ಪದಾರ್ಥಗಳನ್ನು ಹೊಂದಿತ್ತು. ಹೀಗಾಗಿ, ಟಿಂಚರ್ ಆ ರೀತಿ ಪ್ರತಿಕ್ರಿಯಿಸಿದೆ. ಇದು ನಿರೀಕ್ಷಿತವಾದದ್ದು. ನಾವು ಇಲ್ಲಿ ನಕಲಿ ಪನ್ನೀರ್ ಬಳಕೆ ಮಾಡಿಲ್ಲ’ ಎಂದು ಟೋರಿ ರೆಸ್ಟೋರೆಂಟ್ ಹೇಳಿದೆ.
   ಸಾರ್ಥಕ್ ಅವರು ಈ ಪರೀಕ್ಷೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ನೇರವಾಗಿ ಟೋರಿ ಬಿಸ್ನೆಸ್ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಗೌರಿ ಖಾನ್ ಅವರು ಇವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಮುಂದೆ ಆಲೋಚಿಸಿದರೂ ಅಚ್ಚರಿ ಏನಿಲ್ಲ.