ಬೆಂಗಳೂರು;
ಫ್ರೀಡಂ ಪಾರ್ಕ್ನಲ್ಲಿ ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ವತಿಯಿಂದ ರಾಜ್ಯಾಧ್ಯಕ್ಷರಾದ ರಾಮಾಂಜಿನಪ್ಪರವರ ನೇತೃತ್ವದಲ್ಲಿ ಸೆವೆಂತ್ ಡೇ ಅಡ್ವೆoಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀಮತಿ ತಬ್ಸಮ್ ಕೋಂ ಶಾರುಖ್ ರವರ ಅನುಮಾನಸ್ಪದ ಸಾವಿಗೆ ಕಾರಣರಾದ ವೈದ್ಯಾಧಿಕಾರಿಗಳಾದ ಡಾ. ಫರ್ಲಿನ್, ಡಾ. ರಾಜಕುಮಾರ್, ಡಾ. ಫ್ರೆಡ್ ಹಾಗೂ ಸಿಬ್ಬಂದಿಯವರ ವಿರುದ್ಧ ಅಹೋರಾತ್ರಿ ಪ್ರತಿಭಟನೆ ಪ್ರಾರಂಭ ಮಾಡಿದ್ದೂ, ಸದರಿ ಪ್ರತಿಭಟನೆಯಲ್ಲಿ ಸುಮಾರು 100ಕ್ಕೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುತ್ತಾರೆ. ಪ್ರತಿಭಟನೆಯಲ್ಲಿ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿ ಗೌಡ,ನಾಗೇಂದ್ರ, ಸೈಯಿತ್ ತಾರುಖು, ವೆಂಕಟೇಶ್ ಗೌಡ, ನಟರಾಜ್, ಸೇರಿದಂತೆ ಅನೇಕ ಗಣ್ಯರು ಭಾಗಿ.
