ನವದೆಹಲಿ:
ಯೋಗ ಗುರು ಬಾಬಾ ರಾಮ್ದೇವ್ ಅವರು ಇತ್ತೀಚೆಗೆ ರೂಹ್ ಅಫ್ಜಾ ಪಾನೀಯದ ಕುರಿತು ನೀಡಿದ್ದ ‘ಶರಬತ್ ಜಿಹಾದ್’ ಹೇಳಿಕೆಯು ಆಘಾತಕಾರಿಯಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಶರ್ಬತ್ ಜಿಹಾದ್” ಹೇಳಿಕೆಯನ್ನು ದೆಹಲಿ ಹೈಕೋರ್ಟ್ “ಸಮರ್ಥನೀಯವಲ್ಲ” ಮತ್ತು ಆಘಾತಕಾರಿ ಎಂದು ಕರೆದಿದೆ. ಹಮ್ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ರಾಮ್ದೇವ್ ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ‘ಈ ಹೇಳಿಕೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುವಂತಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ಟೀಕೆಯ ನಂತರ, ಪತಂಜಲಿ ಸಂಸ್ಥೆ ವಿವಾದಾತ್ಮಕ ವೀಡಿಯೊಗಳನ್ನು ತೆಗೆದುಹಾಕಲು ಒಪ್ಪಿಕೊಂಡಿತು. ರೂಹ್ ಅಫ್ಜಾವನ್ನು ಗುರಿಯಾಗಿಸಿಕೊಂಡು ರಾಮದೇವ್ ನೀಡಿರುವ ಹೇಳಿಕೆಗೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಭರವಸೆ ನೀಡಲಾಗಿದೆ. ರಾಮ್ದೇವ್ ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ‘ಈ ಹೇಳಿಕೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುವಂತಿದೆ. ಇಂತಹ ಹೇಳಿಕೆಗಳು ಸಮರ್ಥನೀಯವಲ್ಲ. ಈ ರೀತಿ ಮಾತನಾಡುವಾಗ ಗಮನವಿಟ್ಟುಕೊಳ್ಳುವಂತೆ ನಿಮ್ಮ ಕಕ್ಷಿದಾರರಿಗೆ ಹೇಳಿ. ಇಲ್ಲದಿದ್ದರೆ, ನ್ಯಾಯಾಲಯದಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ರಾಮ್ದೇವ್ ಪರ ವಕೀಲರಿಗೆ ಸೂಚಿಸಿದೆ.
ಪತಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್ ದೇವ್ ಅವರು ತನ್ನ ಗುಲಾಬ್ ಶರಬತ್ ಪ್ರಚಾರದ ವೇಳೆ, ಹಮ್ದರ್ದ್ ಅವರ ರೂಹ್ ಅಫ್ಜಾವನ್ನು ಗುರಿಯಾಗಿಸಿಕೊಂಡು ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ಆರೋಪಿಸಿದ್ದರು. ನಂತರ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಮದೇವ್, ತಾವು ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಎಂದಿದ್ದರು. ಹಮ್ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಈ ಪ್ರಕರಣವು ಅವಹೇಳನವನ್ನು ಮೀರಿದ್ದು, ಇದು ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ. ಇದು ದ್ವೇಷ ಭಾಷಣಕ್ಕೆ ಸಮನಾಗಿದೆ. ‘ಶರಬತ್ ಜಿಹಾದ್’ ಎಂದು ಅವರು ಹೇಳುತ್ತಾರೆ. ಇದು ತಪ್ಪು ಎಂದು ಕೋರ್ಟ್ ಎದುರು ವಾದ ಮಾಡಿದ್ದರು. ಇದೀಗ ಕೋರ್ಟ್ ರಾಮ್ದೇವ್ ಅವರಿಗೆ ಚಾಟಿ ಬೀಸಿದೆ.
