ಮುಂಬೈ

ವಿಕ್ಕಿ ಕೌಶಲ್ ನಟನೆಯ ‘ಛಾವ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬಿಗಿದೆ. ಈ ಸಿನಿಮಾ 800 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಇದು ವಿಕ್ಕಿ ಕೌಶಲ್ ವೃತ್ತಿ ಜೀವನದ ಅತ್ಯಂತ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ವಿಕ್ಕಿ ಕೌಶಲ್ ಅವರ ವೃತ್ತಿ ಜೀವನಕ್ಕೂ ಈ ಸಿನಿಮಾದಿಂದ ಮೈಲೇಜ್ ಸಿಕ್ಕಿದೆ. ಈ ಚಿತ್ರದ ಯಶಸ್ಸಿನ ಬಗ್ಗೆ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರು ಮಾತನಾಡಿದ್ದಾರೆ. ಇದಕ್ಕೆ ವಿಕ್ಕಿ ಕೌಶಲ್ ಕಾರಣ ಅಲ್ಲ ಎಂದಿದ್ದಾರೆ.
ವಿಕ್ಕಿ ಕೌಶಲ್ ಅವರು ಐತಿಹಾಸಿಕ ಪಾತ್ರವಾದ ಛತ್ರಪತಿ ಸಾಂಬಾಜಿ ಮಹರಾಜ್ (ಶಿವಾಜಿಯ ಮಗ) ಪಾತ್ರ ಮಾಡಿದ್ದಾರೆ. ಇದು ಕೇವಲ ಮಹಾರಾಷ್ಟ್ರ ಮಾತ್ರವಲ್ಲದೆ, ಇಡೀ ವಿಶ್ವಾದ್ಯಂತ ಯಶಸ್ಸು ಪಡೆಯಿತು. ವಿಕ್ಕಿ ಕೌಶಲ್ ಅವರ ಅದ್ಭುತ ನಟನೆ ಕೂಡ ಸಿನಿಮಾ ಗೆಲುವಿಗೆ ಕಾರಣ. ಆದರೆ, ಇದನ್ನು ವಿಕ್ಕಿ ಕೌಶಲ್ ಕೂಡ ಒಪ್ಪೋದಿಲ್ಲ ಎಂಬುದು ಮಹೇಶ್ ಅವರ ಅಭಿಪ್ರಾಯ.
‘ವಿಕ್ಕಿ ಕೌಶಲ್ ಓರ್ವ ಶ್ರೇಷ್ಠ ನಟ. ಅವರ ನಟನೆಯ ಛಾವ ಸಿನಿಮಾ 800 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜನರು ನನ್ನನ್ನು ನೋಡಲು ಬಂದರು ಎಂದು ಅವರು ಎಂದಿಗೂ ಹೇಳಲ್ಲ. ಜನರು ನನ್ನನ್ನೇ ನೋಡಲು ಬಂದಿದ್ದಾರೆ ಎಂದರೆ ಅವರ ಈ ಹಿಂದಿನ ಐದು ಸಿನಿಮಾಗಳನ್ನು ನೋಡಲು ಬಂದಿರಬೇಕಿತ್ತು ಎನ್ನುತ್ತಾರೆ. ಜನರು ಬಂದಿದ್ದು ನಾನು ಮಾಡಿದ ಪಾತ್ರವನ್ನು ನೋಡಲು ಎಂದು ವಿಕ್ಕಿ ಕೌಶಲ್ ಹೇಳುತ್ತಾರೆ’ ಎಂಬುದು ಮಹೇಶ್ ಮಾತು. ‘ಛಾವ’ಗೂ ಮೊದಲು ರಿಲೀಸ್ ಆದ ಐದು ಸಿನಿಮಾಗಳು ಯಶಸ್ಸು ಕಂಡಿಲ್ಲ. ನನ್ನ ಮಹಾರಾಷ್ಟ್ರ ಹಿಂದಿ ಚಿತ್ರರಂಗವನ್ನು ಉಳಿಸಿದೆ. ಛಾವ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದೆ. ಇದಕ್ಕೆ 80 ಪರ್ಸಂಟ್ ಕ್ರೆಡಿಟ್ ಮಹಾರಾಷ್ಟ್ರಕ್ಕೆ ಹೋಗಬೇಕು. ಪುಣೆಯ ಕೊಡುಗೆಯೂ ದೊಡ್ಡದಿದೆ. ಮಹಾರಾಷ್ಟ್ರ ನಮ್ಮ ಚಿತ್ರರಂಗವನ್ನು, ನಮ್ಮ ಬಾಲಿವುಡ್ ಅನ್ನು ಕಾಪಾಡಿದೆ’ ಎಂದು ಅವರು ಹೇಳಿಕೆ ನೀಡಿದ್ದಾರೆ.
‘ಛಾವ’ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
