ಬೆಂಗಳೂರು:
ಯುದ್ಧದ ಸನ್ನಿವೇಶದಲ್ಲಿ ಭಾರತೀಯ ಸೈನಿಕರಿಗೆ ಧೈರ್ಯ ಮತ್ತು ಶಕ್ತಿ ತುಂಬುವ ಸಲುವಾಗಿ ಭಗವಾನ್ ಪರಶುರಾಮನ ಕೊಡಲಿಯೊಂದಿಗೆ ವಿಶೇಷ ಪೂಜೆಯನ್ನು ಪರಶುರಾಮ್ ಜಯಂತಿ ಆಚರಿಸಲಾಗುತ್ತಿದೆ, ಸಮಾಜಕ್ಕೂ ಧೈರ್ಯ ತುಂಬಲು ಹೋಮ ಯಜ್ಞಗಳನ್ನು ನೆರವೇರಿಸಲಾಗುತ್ತಿದೆ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ರಾಮಮಂದಿರದ ಬಿಬಿಎಂಪಿ ಮೈದಾನದಲ್ಲಿ ಶ್ರೀರಾಮ ಸೇನೆಯ ನೇತೃತ್ವದಲ್ಲಿ ವಿಶೇಷ ಮಹಾಯಾಗ ಮತ್ತು ಶೋಭಾಯಾತ್ರೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಹಿಂದೂಪರ ಕಾರ್ಯಕರ್ತರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮತ್ತು ಇತರ ಹಿಂದೂ ಮುಖಂಡರು ಭಾಗವಹಿಸಿದರು.
ಹಿಂದೂ ಧರ್ಮದ ಬಲವರ್ಧನೆ ಮತ್ತು ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವವರು ನಿರ್ನಾಮವಾಗಬೇಕು ಎಂಬ ಉದ್ದೇಶವೂ ಪರಶುರಾಮ್ ಜಯಂತಿ ಆಚರಣೆಯ ಭಾಗವಾಗಿದೆ, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಡಿದರಿಗೆ ಸಂತಾಪ ಸೂಚಿಸಲು ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಉಗ್ರರಿಗೆ ಅವರ ಪೋಷಕರಿಗೆ ತಕ್ಕ ಉತ್ತರ ನೀಡಲು ಹಾಗೂ ನಮ್ಮ ದೇಶದ ಯೋಧರಲ್ಲಿ ಧೈರ್ಯ ಮತ್ತು ಸ್ಥೈರ್ಯ ತುಂಬಲು ಪರಶುರಾಮ್ ಜಯಂತಿ ಆಚರಿಸಲಾಗುತ್ತಿದೆ, ಸಮಾಜಕ್ಕೂ ಧೈರ್ಯ ತುಂಬಲು ಹೋಮ ಯಜ್ಞಗಳನ್ನು ನೆರವೇರಿಸಲಾಗುತ್ತಿದೆ, ಹೊರಗಡೆ ಎಷ್ಟು ಶತ್ರುಗಳಿದ್ದಾರೋ ದೇಶದ ಒಳಗೂ ಅಷ್ಟೇ ಶತ್ರುಗಳಿದ್ದಾರೆ. ನಮ್ಮಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗುವವರು ಇದ್ದಾರೆ. ಈ ಹಿನ್ನೆಲೆ ಸಮಾಜಕ್ಕೆ, ಹಿಂದೂ ಧರ್ಮಕ್ಕೆ ಬಲ ತುಂಬಲು ಈ ಯಾಗ ಮಾಡುತ್ತಿದ್ದೇವೆ ಎಂದರು
