ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ಸಾವು….!

ಖೇಡಾ

   ಒಂದೇ ಕುಟುಂಬದ 6 ಮಂದಿ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಗುಜರಾತ್​ನ ಖೇಡಾ ಜಿಲ್ಲೆಯ ಮೆಶ್ವೋ ನದಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ನಾಡಿಯಾಡ್ ಅಗ್ನಿಶಾಮಕ ದಳದ ತಂಡವು ಕನಿಜ್ ಗ್ರಾಮದ ಬಳಿ ಸ್ಥಳಕ್ಕೆ ತಲುಪಿ, ಆರು ಶವಗಳನ್ನು ನದಿಯಿಂದ ಹೊರತೆಗೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಮತ್ತೊಂದೆಡೆ ಫ್ಯಾಮಿಲಿ ಮ್ಯಾನ್ 3ಯಲ್ಲಿ ನಟಿಸಿದ್ದ ರೋಹಿತ್ ಎಂಬುವವರ ಮೃತದೇಹ ಜಲಪಾತದ ಬಳಿ ಪತ್ತೆಯಾಗಿದೆ. ಮಧ್ಯಾಹ್ನ ಗರ್ಭಂಗ ಜಲಪಾತದ ಬಳಿ ಅವರ ಮೃತದೇಹ ಪತ್ತೆಯಾಗಿದೆ. ರೋಹಿತ್ ತನ್ನ ಒಂಬತ್ತು ಸಹೋದ್ಯೋಗಿಗಳೊಂದಿಗೆ ಪಿಕ್ನಿಕ್‌ಗೆ ಹೋಗಿದ್ದಾಗ ಜಲಪಾತಕ್ಕೆ ಬಿದ್ದಿದ್ದಾನೆ ಎಂದು ವರದಿಯಾಗಿದೆ. ರಾಣಿ ಪೊಲೀಸ್ ಔಟ್‌ಪೋಸ್ಟ್ ಅಧಿಕಾರಿಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
 
   ಆಕಸ್ಮಿಕವಾಗಿ ರೋಹಿತ್ ಜಲಪಾತಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ, ಇದುವರೆಗೆ ಬೇರೆ ಯಾವುದೆ ಅನುಮಾನ ವ್ಯಕ್ತವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.ಕಳೆದ ವರ್ಷದಿಂದ, ರೋಹಿತ್ ಫ್ಯಾಮಿಲಿ ಮ್ಯಾನ್ ಸೆಟ್‌ಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಜೈದೀಪ್ ಅಹ್ಲಾವತ್ ಮತ್ತು ದಲೀಪ್ ತಹಿಲ್ ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Recent Articles

spot_img

Related Stories

Share via
Copy link