ನಾಯಕನಹಟ್ಟಿ
ಮೂಢನಂಬಿಕೆ, ತಾರತಮ್ಯಗಳಿಂದ ಸಮಾಜದಿಂದ ತೆಗೆದುಹಾಕಲು ಬಸವಣ್ಣನವರು ಕ್ರಾಂತಿ ಮಾಡಿದರು ಎಂದು ಬಸವಕೇಂದ್ರದ ಅಧ್ಯಕ್ಷ ಕೆ.ನಾಗರಾಜ್ ಹೇಳಿದರು.
ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಬುಧವಾರ ಬಸವಜಯಂತಿಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಅವರು ೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿಭೇದ ತೊಡೆದು ಹಾಕಲು ಅಂತರ್ಜಾತಿ ವಿವಾಹ ಮಾಡಿಸಿದರು, ಬಸವಣ್ಣನವರು ಸಮಾನತೆಯ ಸಂದೇಶವನ್ನು ಸಾರಿದ್ದರು, ಬಡವರ, ನೊಂದವರ, ಹಿಂದುಳಿದವರ, ಅನಾಥರ, ದಲಿತರ, ಕಾಯಕ ಜೀವಿಗಳ ಚೈತನ್ಯಸ್ಪೂರ್ತಿ ಆಗಿದ್ದಾರೆ. ಬಸವಣ್ಣ ಈ ನಾಡಿನ ಕ್ರಾಂತಿಪುರುಷ ಸರ್ವರಲ್ಲಿ ಸಮಾನತೆ ಸಾರಿದ ಜಗಜ್ಯೋತಿ ಈ ಜ್ಯೋತಿ ವಿಶ್ವದ ಎತ್ತರಕ್ಕೆ ಬೆಳೆದು ಮನುಕುಲವನ್ನು ಸಮಾನತೆಯ ದಿಕ್ಕಿನಲ್ಲಿ ಕೊಂಡೊಯ್ಯಲು ನುಡಿದಂತೆ ನಡೆದು ತೋರಿಸಿ ತನ್ನ ಬದುಕಿಗೆ ಸಮರ್ಪಿಸಿದವರು ಬಸವಣ್ಣನವರು.
ಸಮಾನತ ದೃಷ್ಠಿಯಿಂದ ಬಸವಣ್ಣನವರು ತನ್ನ ಕುಟುಂಬದವರನ್ನು ತೊರೆದು ಬರುತ್ತಾರೆ. ಅವರ ಹೋರಾಟಗಳು, ವಚನಗಳ ಮುಖಾಂತರ ಸಮಾಜಕ್ಕೆ ಸಂದೇಶವನ್ನು ನೀಡಿದ ದೊಡ್ಡ ಕ್ರಾಂತಿ ಪುರುಷರು ಬಸಣ್ಣನವರು. ನನ್ನನ್ನು ನೀವು ಹೊರಗೆ ಹಾಕಬೇಡಿ ನಾನೇ ಹೋಗುತ್ತೇನೆ ಎಂದು ಅವರು ಹೇಳಿದ್ದರು. ದೊಡ್ಡಮಟ್ಟದಲ್ಲಿ ಒಂದು ಚಳುವಳಿ ವಚನ ಮಾಡುತ್ತಾರೆ. ಒಂದು ದೊಡ್ಡ ಸಂದೇಶವನ್ನು ಮಾಡುತ್ತಾರೆ. ವಚನ ಸಾಹಿತ್ಯದ ಮುಖಾಂತರ ಬಸವಣ್ಣ ನಮ್ಮ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಬಸವಕೇಂದ್ರದ ಅಧ್ಯಕ್ಷ ಕೆ.ನಾಗರಾನ್, ಕಾರ್ಯದರ್ಶಿ ಡಿ.ಎಸ್.ತಿಪ್ಪೇಸ್ವಾಮಿ, ಎಸ್.ಪಿ. ಪ್ರಕಾಶ್, ರೇಖಾ, ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜಣ್ಣ, ತಿಪ್ಪೇಸ್ವಾಮಿ, ಬಸವಕೇಂದ್ರ ಯುವಮುಖಂಡರಾದ ರಾಜೇಶ್ ಎಸ್.ಟಿ.ರಾಜಣ್ಣ, ವಿಜಯಪ್ರಕಾಶ್, ಗ್ರಾ.ಪಂ. ಸದಸ್ಯೆ ಪ್ರೇಮಲತ, ಶಂಕರ್ ಮೂರ್ತಿ ಎಸ್.ಎಂ.ತಿಪ್ಪೇಸ್ವಾಮಿ, , ಬಸವಕೇಂದ್ರದ ಮಹಿಳೆಯರು, ಹಾಗೂ ಇನ್ನಿತರರು ಇದ್ದರು.
