ಚಿಕ್ಕಬಳ್ಳಾಪುರ:
ತಾಲೂಕಿನ ವರ್ಲಕೊಂಡ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಮತ ಸೈನಿಕ ದಳ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಕಾರ್ಯಕ್ರಮ ನಿಮಿತ್ತ ಬಾಗೇಪಲ್ಲಿಗೆ ತೆರಳಿದ್ದ ಇವರು ಇನ್ನೋವಾ ಕಾರಿನಲ್ಲಿ ವಕೀಲ ಸ್ನೇಹಿತರ ಜೊತೆಗೂಡಿ ಬೆಂಗಳೂರಿನತ್ತ ಬರುತ್ತಿದ್ದರು. ವರ್ಲಕೊಂಡ ಸೇತುವೆ ಬಳಿ ಇನ್ನೊಬ್ಬ ಕಾರಿನ ಟೈಯರ್ ಸಿಡಿದ ಪರಿಣಾಮ ಕಾರು ಹತ್ತಾರು ಪಲ್ಟಿ ಯಾಗಿ ರಸ್ತೆಯ ಬಳಿಯ ಹಳ್ಳಕ್ಕೆ ಬಿದ್ದ ಪರಿಣಾಮ ಚೆನ್ನಕೃಷ್ಣಪ್ಪ ಸ್ಥಳದಲ್ಲೇ ಮೃತರಾಗಿದ್ದಾರೆ.
ಇವರ ಜೊತೆಗಿದ್ದವರು ವಕೀಲರೆಂದು ತಿಳಿದು ಬಂದಿದ್ದು ಅವರ ಹೆಸರು ಗೊತ್ತಿಲ್ಲ. ಈ ಅಪಘಾತ ದಲ್ಲಿ ಅವರಿಗೆ ಕೈ ಬೆರಳು ತುಂಡಾಗಿದೆ ಎಂಬ ಮಾಹಿತಿ ಇದ್ದು, ಘಟನಾ ಸ್ಥಳದಿಂದ ಅವರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದೆ ಈ ಘಟನೆ ಬುಧವಾರ ಸಂಜೆ ನಡೆದಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ಪೆರೇಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಘಟನೆ ಸಂಬಂಧಪಟ್ಟ ಮೃತ ಚೆನ್ನಕೃಷ್ಣಪ್ಪ ಅವರ ಮಗ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಈ ಅಪಘಾತಕ್ಕೆ ಕಾರಣವೇನು ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.
