ನಾಯಕನಹಟ್ಟಿ:
ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಗ್ರಾಮದ ತಂದೆ ಸಣ್ಣ ಮಲ್ಲಯ್ಯ, ತಾಯಿ ಲಕ್ಷ್ಮೀ ಇವರ ಜೇಷ್ಠ ಪುತ್ರಿ ನೇತ್ರಾವತಿ ಎಮ್ ಸಣ್ಣ ಮಲ್ಲಯ್ಯ ರವರು ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿ ಗ್ರಾಮಾಂತರ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 564 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿನಿ ಪಡೆದ ಫಲಿತಾಂಶಕ್ಕೆ ತಂದೆ ತಾಯಿ ಹಾಗೂ ಸಂಬಂಧಿಕರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
