ಸೆನ್ಸೆಕ್ಸ್‌ 155 ಅಂಕ ಇಳಿಕೆ, ನಿಫ್ಟಿ 24,379ಕ್ಕೆ ಸ್ಥಿರ

ಮುಂಬೈ: 

    ಸ್ಟಾಕ್‌ ಮಾರ್ಕೆಟ್‌ನಲ್ಲಿ  ಇವತ್ತು ಸೆನ್ಸೆಕ್ಸ್ 155 ಅಂಕ ಕಳೆದುಕೊಂಡು 80,641ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ನಿಫ್ಟಿ 81 ಅಂಕ ಕಳೆದುಕೊಂಡು 24,379ಕ್ಕೆ ಸ್ಥಿರವಾಗಿದೆ. ಇವತ್ತು ಸ್ಟಾಕ್‌ ಮಾರ್ಕೆಟ್‌ ಫ್ಯಾಟ್‌ ಆಗಿತ್ತು. ಅಂಥ ಏರಿಳಿತಗಳು ಇದ್ದಿರಲಿಲ್ಲ. ಮಹೀಂದ್ರಾ ಆಂಡ್‌ ಮಹೀಂದ್ರಾ ಮತ್ತು ಭಾರ್ತಿ ಏರ್‌ ಟೆಲ್‌ ಷೇರುಗಳು ಲಾಭ ಗಳಿಸಿದರೂ, ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ ಷೇರಿನ ದರ ಇಳಿಯಿತು.ಬ್ಯಾಂಕ್‌ ಆಫ್‌ ಬರೋಡಾ ಷೇರು ದರದಲ್ಲಿ 10% ನಷ್ಟ ಆಯಿತು. ಬ್ಯಾಂಕ್‌ ಲಾಭ ಗಳಿಸಿದ್ದರೂ, ನಿರೀಕ್ಷಿತ ಮಟ್ಟ ತಲುಪದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. 

    ಖಾಸಗಿ ವಲಯದ ಯಸ್‌ ಬ್ಯಾಂಕ್‌ ಈಗ ಸುದ್ದಿಯಲ್ಲಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯಸ್‌ ಬ್ಯಾಂಕ್‌ ಅನ್ನು ಖರೀದಿಸಲು ಜಪಾನ್‌ ಮೂಲದ ಬ್ಯಾಂಕಿಂಗ್‌ ದಿಗ್ಗಜ ಸುಮಿಟೊಮೊ ಮಿತ್ಸುಯಿ ಬ್ಯಾಂಕಿಂಗ್‌ ಕಾರ್ಪೊರೇಷನ್‌ ಸಂಸ್ಥೆಯು ಖರೀದಿಸಲಿದೆ ಎಂದು ಇಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಸಂಕ್ಷಿಪ್ತವಾಗಿ SMBC ಎಂದು ಕರೆಯುವ ಇದು ಜಪಾನಿನ ಬಹುರಾಷ್ಟ್ರೀಯ ಬ್ಯಾಂಕ್‌ ಆಗಿದ್ದು, ಯಸ್‌ ಬ್ಯಾಂಕ್‌ನ ಬಹುಪಾಲು ಷೇರುಗಳನ್ನು ಖರೀದಿಸಲು ಮುಂದಾಗಿದೆ. SMBC ಯ ಪ್ರಧಾನ ಕಚೇರಿ ಜಪಾನಿನ ಟೋಕಿಯೊದಲ್ಲಿದೆ.

   ಯಸ್‌ ಬ್ಯಾಂಕ್‌ ಷೇರಿನ ಈಗಿನ ದರ 19 ರುಪಾಯಿ ಆಗಿದೆ. ಸದ್ಯಕ್ಕೆ ಎಸ್‌ಬಿಐ ಇದರಲ್ಲಿ 24% ಷೇರುಗಳನ್ನು ಹೊಂದಿದೆ. ಎಸ್‌ಬಿಐ ಕೂಡ ಹೊಸ ಸ್ಟ್ರಾಟಜಿಕ್‌ ಇನ್ವೆಸ್ಟರ್‌ಗಳ ಹುಡುಕಾಟದಲ್ಲಿದೆ. ಡೀಲ್‌ ಯಶಸ್ವಿಯಾದರೆ ಬ್ಯಾಂಕಿನ 26% ಷೇರುಗಳನ್ನು ಎಸ್‌ಎಂಬಿಸಿ ಖರೀದಿಸಲಿದೆ. ಎಲ್‌ಐಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ ಷೇರು ಪಾಲನ್ನು ಹೊಂದಿವೆ. ಯಸ್‌ ಬ್ಯಾಂಕ್‌ನ ಮಾರ್ಕೆಟ್‌ ಕ್ಯಾಪ್‌ 55,595 ಕೋಟಿ ರುಪಾಯಿಗಳಾಗಿದೆ.

Recent Articles

spot_img

Related Stories

Share via
Copy link