ಬೆಂಗಳೂರು
ಹೆಚ್ಎಸ್ಆರ್ ಲೇಔಟ್ನ ಲೇಡೀಸ್ ಪಿಜಿ ಅವಾಂತರ ಬಳಿಕ ಎಚ್ಚೆತ್ತ ಪಾಲಿಕೆ, ಇದೀಗ ರಾಜಧಾನಿಯ ಪಿಜಿಗಳ ಮೇಲೆ ಕ್ರಮ ಕೈಗೊಳ್ಳೋಕೆ ಸಜ್ಜಾಗಿದೆ. ಬೆಂಗಳೂರಿನ ಅನಧಿಕೃತ ಪಿಜಿಗಳು ಹಾಗೂ ನಿಯಮಗಳನ್ನ ಉಲ್ಲಂಘಿಸುವ ಪಿಜಿಗಳಿಗೆ ಚಾಟಿ ಬೀಸಲು ಪಾಲಿಕೆ ಸಜ್ಜಾಗಿದೆ. ನಗರದ ಪಿಜಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊರಟಿರುವ ಬಿಬಿಎಂಪಿ, ಇದೀಗ ರೂಲ್ಸ್ ಪಾಲಿಸದ ಪಿಜಿಗಳನ್ನ ಬಂದ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪಿಜಿಗಳಿಗೆ ಪಾಲಿಕೆ ರೂಲ್ಸ್ ಗಳೇನು?
- ಸಿಸಿಟಿವಿ ಅಳವಡಿಕೆ ಕಡ್ಡಾಯ, 90 ದಿನಗಳ ಡೇಟಾ ಸಿಗುವ ವ್ಯವಸ್ಥೆ ಇರಬೇಕು.
- ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನ ಖಚಿತಪಡಿಸಿಕೊಳ್ಳಬೇಕು.
- ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯ ಇರಬೇಕು.
- ಕಡ್ಡಾಯವಾಗಿ FSSAI ಇಲಾಖೆಯಿಂದ ಲೈಸನ್ಸ್ ಪಡೆದಿರಬೇಕು.
- ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಬೇಕು.
ಸದ್ಯ ಈ ನಿಯಮಗಳಷ್ಟೇ ಅಲ್ಲದೇ ಪಿಜಿಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಗಮನ ಹರಿಸುವ ಹೊಣೆಯನ್ನ ಕೂಡ ಪಿಜಿಗಳು ಪಾಲಿಸೋಕೆ ಪಾಲಿಕೆ ಸೂಚನೆ ನೀಡಿದೆ. ಅಲ್ಲದೇ ಪಿಜಿಗಳ ನಿವಾಸಿಗಳಿಂದ ಸಾರ್ವಜನಿಕರ ಹಿತ ಹಾಳಾಗ್ತಿರೋ ಬಗ್ಗೆ ದೂರುಗಳು ಬರುತ್ತಿರುವ ಬೆನ್ನಲ್ಲೆ ಕೋಲಿವಿಂಗ್ ಪಿಜಿಗಳ ಮೇಲೂ ಕಣ್ಣೀಡೋಕೆ ಪಾಲಿಕೆ ಸಜ್ಜಾಗಿದೆ. ಸದ್ಯ ಪಾಲಿಕೆಯ ಈ ಚಿಂತನೆಯಿಂದ ರಾಜಧಾನಿಯ ಕೋಲಿವಿಂಗ್ ಪಿಜಿಗಳು, ಹದ್ದುಮೀರಿದ ಪಿಜಿಗಳಿಗೆ ಎಷ್ಟರಮಟ್ಟಿಗೆ ಬ್ರೇಕ್ ಬೀಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
