ಭಾರತದ ಕ್ಷಿಪಣಿ ದಾಳಿ : ಪಾಕ್‌ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ?

ಇಸ್ಲಾಮಾಬಾದ್:‌ 

    ವಿದೇಶಿ ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ  ಸಂದರ್ಶನದಲ್ಲಿ ಮುಜುಗರ ಅನುಭವಿಸಿದ ನಂತರ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಮತ್ತೊಂದು ಬಾರಿ ಟ್ರೋಲ್‌ ಆಗಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಖಾಸಗಿ ಸಂದರ್ಶನದಲ್ಲಿ ನಾವು ಭಾರತದ ಕ್ಷಿಪಣಿ ದಾಳಿಗಳನ್ನು ಏಕೆ ತಡೆಯಲಿಲ್ಲ ಎಂದು ಇದೀಗ ಸ್ಪಷ್ಟನೆ ನೀಡಿದ್ದಾರೆ. ನಮಗೆ ದಾಳಿ ತಡೆಯುವ ಶಕ್ತಿ ಇದೆ. ಆದರೆ ನಾವು ವಿರೋಧ ಒಡ್ಡಿದರೆ ನಮ್ಮ ಶಸ್ತ್ರಾಸ್ತ್ರಗಳ ಸ್ಥಳವನ್ನು ಬಹಿರಂಗಪಡಿಸಿದಂತಾಗುತ್ತದೆ. ಇದು ದೇಶದ ಭದ್ರತೆಗೆ ಧಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

     ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಭಾರತ ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕದ ಮೇಲೆ ಭಾರತ ಮತ್ತೆ ದಾಳಿ ನಡೆಸಿದೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ. ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ HQ-9 ಧ್ವಂಸಗೊಳಿಸಿದೆ ಎಂದು ತಿಳಿದು ಬಂದಿದೆ.

   ಲಾಹೋರ್ ಮತ್ತು ಕರಾಚಿ ಮೇಲೆ ದಾಳಿ ಬಳಿಕ ಇದೀಗ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಹೊಸ ಸ್ಫೋಟಗಳು ವರದಿಯಾಗಿವೆ. ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿ ಬಳಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾವಲ್ಪಿಂಡಿಯ ಹೊರತಾಗಿ, ಗುಜ್ರಾನ್‌ವಾಲಾ, ಚಕ್ವಾಲ್, ಅಟ್ಟಾಕ್, ಬಹಾವಲ್ಪುರ್, ಮಿಯಾನೋ ಮತ್ತು ಚೋರ್‌ಗಳಲ್ಲಿಯೂ ಸ್ಫೋಟಗಳು ವರದಿಯಾಗಿವೆ. ರಾವಲ್ಪಂಡಿ ಕ್ರಿಕೆಟ್‌ ಮೈದಾನದ ಬಳಿಯೇ ಸ್ಪೋಟ ಸಂಭವಿಸಿತ್ತು. 

   ಭಾರತ ತನ್ನ ಮೇಲಿನ ದಾಳಿಯನ್ನು ತಡೆ ಹಿಡಿದಿದೆ. ಪ್ರತಿದಾಳಿಯಲ್ಲಿ ಭಾರತ ಪಾಕಿಸ್ತಾನದ ಪ್ರಮುಖ 16 ನಗರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. LoC ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದೀಗ ಜಮ್ಮುವಿನ ಸಾಂಬಾ ಜಿಲ್ಲೆಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ತಿಳಿದು ಬಂದಿದೆ.

Recent Articles

spot_img

Related Stories

Share via
Copy link