ನವದೆಹಲಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್ ಆರಂಭಿಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಮೇ 7ರ ಬೆಳಗಿನ ಜಾವ ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದರು. ಇಷ್ಟು ಮಾತ್ರವಲ್ಲದೆ ಭಾರತದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಸೇನೆಯು ಭಾರಿ ನಷ್ಟವನ್ನು ಅನುಭವಿಸಿತು. ಇದಾದ ನಂತರ, ಪಾಕಿಸ್ತಾನ ಮತ್ತೆ ಭಾರಿ ಶೆಲ್ ದಾಳಿಯ ಮೂಲಕ ಭಾರತವನ್ನು ಕೆರಳಿಸಲು ಪ್ರಯತ್ನಿಸಿದಾಗ ಅದಕ್ಕೆ ಸೂಕ್ತ ಉತ್ತರ ನೀಡಲಾಯಿತು. ಮೇ 10ರ ಹೊತ್ತಿಗೆ ವಾಯುಪಡೆಯು ಪಾಕಿಸ್ತಾನದ ಅನೇಕ ವಾಯುನೆಲೆಗಳನ್ನು ನಾಶಪಡಿಸಿತ್ತು.
ಈ ಇಡೀ ಘಟನೆಯಲ್ಲಿ ಭಾರತವು ಸರ್ಗೋಧಾ ವಾಯುನೆಲೆಗೆ ಭಾರೀ ಹಾನಿಯನ್ನುಂಟು ಮಾಡಿತ್ತು, ಇದು ಪಾಕಿಸ್ತಾನದ ಪರಮಾಣು ಸಂಗ್ರಹಾಗಾರ ಪ್ರದೇಶವೆಂದು ಪರಿಗಣಿಸಲ್ಪಟ್ಟ ಕಿರಾನಾ ಬೆಟ್ಟಗಳನ್ನು ಗುರಿಯಾಗಿಸುವ ಸ್ಪಷ್ಟ ಸೂಚನೆಯನ್ನು ನೀಡಿತ್ತು. ಭಾರತ ಪಾಕಿಸ್ತಾನದ ಅಘೋಷಿಯ ಯುದ್ಧದಲ್ಲಿ ಗೆದ್ದಿದ್ಯಾರು ಎನ್ನುವ ಚರ್ಚೆ ಮುಂದುವರೆದಿದೆ. ಆಸ್ಟ್ರಿಯಾದ ವಾಯುಯಾನ ವಿಶ್ಲೇಷಕ ಟಾಮ್ ಕೂಪ್ ಭಾರತಕ್ಕೆ ಗೆಲುವು ಸಿಕ್ಕಿರಿದು ಸ್ಪಷ್ಟವಾಗಿದೆ ಎಂದು ಕೆಲವು ಕಾರಣಗಳನ್ನು ನೀಡಿದ್ದಾರೆ.








