ಚಾಮರಾಜನಗರ:
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀ ಗುರುಸ್ವಾಮೀಜಿ 70ನೇ ವಯಸ್ಸಿಗೆ ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಗುರುಸ್ವಾಮೀಜಿ ಅವರು ಸಾಲೂರು ಮಠದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಇಂದು ಮುಂಜಾನೆ ಅವರು ಲಿಂಗೈಕ್ಯರಾಗಿದ್ದು, ಇಂದು ಸಂಜೆ 5.30ಕ್ಕೆ ಸಾಲೂರು ಮಠದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮೀಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶ್ರೀಗಳು ಚಿಕಿತ್ಸೆ ಸ್ಪಂದಿಸದ ಹಿನ್ನೆಲೆ ಮಠಕ್ಕೆ ಕರೆತಂದಿದ್ದರು. ಇಂದು ಮುಂಜಾನೆ ಗುರುಸ್ವಾಮೀಜಿ ನಿಧನರಾಗಿದ್ದಾರೆ. ಸುತ್ತೂರು ಶ್ರೀಗಳು ಹಾಗೂ ಸಿದ್ಧಗಂಗಾ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದ್ದು, ಸಂಜೆ 5 ಗಂಟೆ ಸುಮಾರಿಗೆ ಮಠದ ಆವರಣದಲ್ಲೇ ಅಂತ್ಯಕ್ರಿಯೆ ಕೂಡ ನೆರೆವೇರಲಿದೆ.








