ಮಂಗಳೂರು:
ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಸೇರಿ ವಿವಿಧ ಕ್ಷೇತ್ರಗಳ 16 ಸಾಧಕರನ್ನು ಪ್ರತಿಷ್ಠಿತ ಯಕ್ಷಧ್ರುವ ಕಲಾಗೌರವ 2025ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲಂಗಾರು ವೇದಮೂರ್ತಿ ಈಶ್ವರ್ ಭಟ್, ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ, ಡಾ.ಬಿ.ಎ. ವಿವೇಕ್ ರೈ, ರಂಗ ಮನೆ ಸುಳ್ಯ, ಹೇರಂಜಾಲು ಗೋಪಾಲ ಗಾಣಿಗ, ಡಾ.ನಾಗವೇಣಿ ಮಂಚಿ, ವಸಂತಗೌಡ ಕಾಯರ್ತಡ್ಕ, ವಿದ್ವಾನ್ ಎಂ.ನಾರಾಯಣ, ಶಂಕರ ನಾರಾಯಣ ಅಡಿಗ ಕುಂಬಳೆ, ಕಿಶೋರ್ ಶೆಟ್ಟಿ, ವಿದುಷಿ ಶಾರದ ಮಣಿ ಶೇಖರ್, ದಾಮೋದರ ಶೆಟ್ಟಿ ಮಂಜೇಶ್ವರ, ನೋಣಯ್ಯ ನಲಿಕೆ ವಿಟ್ಲ, ಸಂಜೀವ ಪರವ, ಲೋಕನಾಥ ಆಚಾರ್ಯ, ಗುಣಪಾಲ ಕದಂಬ ಅವರಿಗೆ ಯಕ್ಷಧ್ರುವ ಕಲಾಗೌರವ ಪ್ರಶಸ್ತಿಗೆ ನೀಡಲಾಗುತ್ತದೆ.
ಅಡ್ಯಾರ್ ಗಾರ್ಡನ್ನಲ್ಲಿ ಜೂನ್ ೧ರಂದು ಬೆಳಗ್ಗೆ ೯.೩೦ರಿಂದ ರಾತ್ರಿ ೧೧ರ ವರೆಗೆ ದಿನವಿಡೀ ರಾಷ್ಟ್ರೀಯ ಕಲಾ ಸಮ್ಮೇಳನ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ದಿನವಿಡೀ ಕಲಾ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಈ ಪ್ರಶಸ್ತಿ ತಲಾ ೨೦,೦೦೦ ರು. ನಗದು ಬಹುಮಾನ ಒಳಗೊಂಡಿದೆ ಎಂದು ಯಕ್ಷಧ್ರುವ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
