ನಾಯಕನಹಟ್ಟಿ :
ನನ್ನನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಆಯ್ಕೆ ಮಾಡಿದಂತಹ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರುಗಳಿಗೆ, ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನೂತನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್‌ಕುಮಾರ್.ಕೆ ಹೇಳಿದ್ದಾರೆ.
ಸಮೀಪದ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ತೆರವಾದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ಶಶಿಧರ್ ನೇತೃತ್ವದಲ್ಲಿ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಅರುಣ್‌ಕುಮಾರ್.ಕೆ, ರಾಮರೆಡ್ಡಿ.ಟಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ರಾಮರೆಡ್ಡಿ 5 ಮತಗಳನ್ನು ಪಡೆದು ಹೀನಾಯ ಸೋಲನ್ನು ಅನುಭವಿಸಿದರು. 9 ಮತಗಳನ್ನು ಪಡೆದು ಅರುಣ್‌ಕುಮಾರ್ ಕೆ. ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶಶಿಧರ್ ಹೇಳಿದರು.
ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ. ಕಾಂಗ್ರೆಸ್ ಶಕ್ತಿ ದೇಶದ ಆಸ್ತಿ, ಕಾಂಗ್ರೆಸ್ ಇತಿಹಾಸ ಸರ್ವರಿಗೂ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದಡಿ ಕಾಂಗ್ರೆಸ್ ಸರ್ಕಾರ ಕೆಲಸ. ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದೆ.
ಇದರಿಂದ ರಾಜ್ಯದ ಜನತೆ ಜೀವನಮಟ್ಟ ಸುಧಾರಿಸಿ ಎಲ್ಲಾರು ನೆಮ್ಮದಿಯಿಂದ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದರೆ ರಾಜ್ಯದ ಮತದಾರರಿಗೂ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದೆ. ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಸರ್ಕಾರ ಬಡವರ ಬಳಿ ಹೋಗುವ ಕೆಲಸ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಡಿಪಿ ಸದಸ್ಯ ಎಸ್ ಬಿ ವಿಶ್ವನಾಥ್ ರೆಡ್ಡಿ, ಅಶೋಕ್ ರೆಡ್ಡಿ, ನರಸಿಂಹರೆಡ್ಡಿ, ನಿಂಗಣ್ಣ, ಬೂದಿಹಳ್ಳಿ ಉಮೇಶ್, ಹಿರೇಹಳ್ಳಿ ಕೃಷ್ಣಪ್ಪ, ಬೇಡರಡ್ಡಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ.ವಿ. ವೇಣುಗೋಪಾಲ ರೆಡ್ಡಿ, ಬಿ.ಒ.ತಿಮ್ಮಯ್ಯ, ಜಿ.ಎಂ.ಸುಧಾ, ಯಲ್ಲಮ್ಮ, ಕೆ.ವಿ.ಶಿವಕುಮಾರ್, ಎನ್.ತ್ರಿವೇಣಿ, ಜಯಲಕ್ಷ್ಮಿ, ಪಿಡಿಒ ಮೋಹನ್ ದಾಸ್, ತಾಲೂಕು ಪಂಚಾಯತಿ ಸಿಬ್ಬಂದಿಗಳಾದ ಡಿ.ಪ್ರವೀಣ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ಬಿ.ಬೋಸಯ್ಯ, ಸೇರಿದಂತೆ ಗ್ರಾಮಸ್ಥರು ಇದ್ದರು.








