2 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ…!

ನಾಯಕನಹಟ್ಟಿ : 

    ಡಿ.ಎಂ.ಎಫ್‌ನ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಜಗಳೂರು ಗಡಿ ರಸ್ತೆ ಮಾರ್ಗ, ಚನ್ನಬಸಯ್ಯನಹಟ್ಟಿ, ಗೌಡಗೆರೆ, ಜೋಗಿಹಟ್ಟಿ, ಮಲ್ಲೂರಹಟ್ಟಿ ೦.೦೦ ಕಿ.ಮೀ.ಯಿಂದ ೯.೫೦ರವರೆಗೆ ರಸ್ತೆ ಅಭಿವೃದ್ಧಿ ಪಡಿಸಲು ೨.೦೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ನೆರವೇರಿಸಿದರು.

   ಸುದ್ದಿಗಾರರೊಂದಿಗೆ ನಂತರ ಮಾತನಾಡಿದ ಅವರು ಸತತವಾಗಿ ೭ ಬಾರಿ ಶಾಸಕನಾಗಿದ್ದೇನೆ ನನಗೆ ಹಿಂದೆ ಬಂದವರು ಮಂತ್ರಿಗಳಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ ಆದರೆ ಹಿರಿಯನಿದ್ದೇನೆ ೭ ಬಾರಿ ಗೆದ್ದರೂ ಸಚಿವ ಸ್ಥಾನ ನೀಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

   ಮೊಳಕಾಲ್ಮೂರು, ಬಳ್ಳಾರಿ, ಮತ್ತು ಕೂಡ್ಲಿಗಿ ಕ್ಷೇತ್ರದಲ್ಲಿ ಮತದಾರರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ, ನನ್ನ ಮೇಲೆ ಭರವಸೆ ಇಟ್ಟು ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಹಿಂದೆ ಇದ್ದ ಸಂದರ್ಭದಲ್ಲಿ ೩ ಬಾರಿ ಗೆದ್ದರೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಪದ್ಧತಿಗಳು ಮಾಯವಾಗಿವೆ. ಉಪಚುನಾವಣೆಯಲ್ಲಿ ಗೆಲವು ಸಾಧಿಸಿದ್ದೇನೆ. ಹೈಕಮಾಂಡ್ ಸಚಿವಸ್ಥಾನ ಕೊಟ್ಟರೆ ನಿಭಾಯಿಸುವ ಶಕ್ತಿ ನನ್ನಲ್ಲಿ ಇದೆ. ಇದನ್ನು ಮನಗಂಡು ವರಿಷ್ಟರು ತೀರ್ಮಾನ ತೆಗೆದುಕೊಳ್ಳಬೇಕು. ಸಚಿವ ಸ್ಥಾನ ನೀಡಿದರೆ ಕ್ಷೇತ್ರದಲ್ಲಿ ಇನ್ನು ಹೆಚ್ಚು ಕೆಲಸಗಳನ್ನು ಮಾಡಲು ಸಹಕಾರಿಯಾಗಲಿದೆ.

   ಜನಗಳ ಆಶೀರ್ವಾದದಿಂದ ಪ್ರತಿ ಬಾರಿ ಗೆಲುವು ಸಾಧಿಸಿದ್ದೇನೆ. ನನ್ನಲ್ಲಿರುವ ಬುದ್ಧಿವಂತಿಕೆ, ಅನುಭವವನ್ನು ಉಪಯೋಗಿಸಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ. ಕ್ಷೇತ್ರದ ಮತದಾರರ ಅಭಿಪ್ರಾಯ ಕೂಡ ಇದೇ ರೀತಿ ಇರುತ್ತದೆ. ಕ್ಷೇತ್ರದ ಮತದಾರರು ಶಾಸಕನಾಗಿ ನೋಡಿದ್ದಾರೆ ಒಂದು ಬಾರಿ ಸಚಿವನಾಗಿ ನೋಡಬೇಕು ಎಂದು ಬಯಸುತ್ತಿದ್ದಾರೆ. ಸಚಿವನಾಗಲು ನನಗೆ ಅರ್ಹತೆ ಇದೆ. ಆದ್ದರಿಂದ ಸಚಿವ ಸ್ಥಾನ ನೀಡಲು ವರಿಷ್ಟರು ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆಂದು ಭರವಸೆಯಿಂದ ಮಾತನಾಡಿದರು.

    ಈ ಸಂದರ್ಭದಲ್ಲಿ ಉಪಸ್ಥಿತರಾದ ಗೌಡಗೆರೆ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಮಾಜಿ.ಗ್ರಾ.ಪಂ. ಅಧ್ಯಕ್ಷ ಹಾಲಿ ಸದಸ್ಯ ಟಿ. ರಂಗಪ್ಪ, ಅನ್ನಪೂರ್ಣೇಶ್ವರಿ, ಸರ್ವ ಸದಸ್ಯರುಗಳು, ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಮಾಜಿ. ಜಿ.ಪಂ. ಅಧ್ಯಕ್ಷ ಬಾಲರಾಜ್, ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿರೆಡ್ಡಿ. ಕಾಂಗ್ರೆಸ್ ಮುಖಂಡ ಪ್ರಭುಸ್ವಾಮಿ, ಜಾಕೀರ್‌ಹುಸೇನ್, ಬಸಪ್ಪನಾಯಕ, ಮುದಿಯಪ್ಪ, ಬ್ಯಾಂಕ್ ಸೂರನಾಯಕ, ಬೋರನಾಯಕ, ಓಬಳೇಶ್, ಗುತ್ತಿಗೆದಾರ ಗುಂಡುಮುಣುಗು ಪ್ರಕಾಶ್, ಯರಿಸ್ವಾಮಿ ಗೌಡಗೆರೆ ಗ್ರಾ.ಪಂ. ಮುಖಂಡರುಗಳು, ಮಲ್ಲೂರಹಳ್ಳಿ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಕಾಟಯ್ಯ, ಜೋಗಿಹಟ್ಟಿ ತಿಪ್ಪೇಸ್ವಾಮಿ, ವೆಂಕಟೇಶ್, ಪಿ.ಡಿ.ಓ. ಈಶ್ವರಪ್ಪ, ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರು, ನಾಯಕನಹಟ್ಟಿ ಪ.ಪಂ ಸದಸ್ಯರದ ಜೆ. ಆರ್. ರವಿ ಕುಮಾರ್, ಮಾಜಿ ಗ್ರಾ.ಪಂ ಸದಸ್ಯ ಆರ್.ಶ್ರೀಕಾಂತ್ ಹಾಗೂ ಇನ್ನಿತರರು, ಕಾಂಗ್ರೆಸ್ ಮುಖಂಡರುಗಳು ಇದ್ದರು.

ಸತತವಾಗಿ ೭ ಬಾರಿ ಶಾಸಕನಾಗಿದ್ದೇನೆ ನನಗೆ ಹಿಂದೆ ಬಂದವರು ಮಂತ್ರಿಗಳಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ ಆದರೆ ಹಿರಿಯನಿದ್ದೇನೆ ೭ ಬಾರಿ ಗೆದ್ದರೂ ಸಚಿವ ಸ್ಥಾನ ನೀಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.-ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ

Recent Articles

spot_img

Related Stories

Share via
Copy link