ಭಾರತಕ್ಕೆ ಬಂದಿಳಿದ ಎಲಾನ್ ಮಸ್ಕ್‌ ತಂದೆ : ಅಯೋಧ್ಯೆ ರಾಮ ಮಂದಿರಕ್ಕೂ ಭೇಟಿ

ನವದೆಹಲಿ:

    ಎಲಾನ್ ಮಸ್ಕ್‌  ತಂದೆ ಎರಾಲ್ ಮಸ್ಕ್  ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ. ಐದು ದಿನಗಳ ಭೇಟಿಯಲ್ಲಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ  ಭೇಟಿ ನೀಡಲಿದ್ದಾರೆ ಮತ್ತು ಹಲವಾರು ವ್ಯಾಪಾರ ಸಂಬಂಧಿತ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಜೂನ್ 6ರಂದು ತಮ್ಮ ಭೇಟಿಯನ್ನು ಮುಗಿಸಿ ದಕ್ಷಿಣ ಆಫ್ರಿಕಾಗೆ ವಾಪಸಾಗಲಿದ್ದಾರೆ.

   ಎರಾಲ್ ಮಸ್ಕ್ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಜೂನ್ 2ರಂದು ನಡೆಯುವ ಕಂಪನಿಯ ಕಾರ್ಯಕ್ರಮದಲ್ಲಿ ಅವರು ನೀತಿ ನಿರೂಪಕರು, ಹೂಡಿಕೆದಾರರು, ವ್ಯಾಪಾರ ನಾಯಕರು ಮತ್ತು ವಿವಿಧ ಸಚಿವಾಲಯಗಳ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಇದರ ಜೊತೆಗೆ, ಹರಿಯಾಣದ ಸಫಿಯಾಬಾದ್‌ನಲ್ಲಿರುವ ಸರ್ವೊಟೆಕ್‌ನ ಸೌರ ಮತ್ತು ಇವಿ ಚಾರ್ಜರ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಕೂಡ ಉಪಸ್ಥಿತರಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

   “ಎರಾಲ್ ಮಸ್ಕ್ ರಾಮ ಜನ್ಮಭೂಮಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಮ ಲಲ್ಲಾರ ಆಶೀರ್ವಾದ ಪಡೆಯಲಿದ್ದಾರೆ. ಇದು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗಿನ ಅವರ ಒಡನಾಟವನ್ನು ತೋರಿಸುತ್ತದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

    ಭಾರತದ ಸರ್ವೊಟೆಕ್ ಕಂಪನಿಯ ಜಾಗತಿಕ ಸಲಹಾ ಮಂಡಳಿಯ ಸದಸ್ಯರಾಗಿ ಇತ್ತೀಚೆಗೆ ನೇಮಕಗೊಂಡಿರುವ ಎರಾಲ್, ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ತನ್ನ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. “ಮಸ್ಕ್ ಅವರು ಸರ್ವೊಟೆಕ್‌ನ ನಾಯಕತ್ವ ತಂಡಕ್ಕೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲಿದ್ದಾರೆ. ಭಾರತದ ಉತ್ಪಾದನಾ ಘಟಕಗಳ ಪರಿಶೀಲನೆಯ ಜೊತೆಗೆ, ಸರ್ಕಾರ ಮತ್ತು ಹೂಡಿಕೆದಾರ ಗುಂಪುಗಳೊಂದಿಗೆ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ” ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

Recent Articles

spot_img

Related Stories

Share via
Copy link