ವಿಶ್ವದ ನಂಬರ್​ 1 ಚೆಸ್​ ಚತುರನಿಗೆ ಸೋಲುಣಿಸಿದ ಡಿ. ಗುಕೇಶ್

ನವದೆಹಲಿ :

    ಭಾರತದ ಯುವ ಚೆಸ್ ಚತುರ ಡಿ. ಗುಕೇಶ್  ವಿಶ್ವದ ನಂಬರ್ 1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸನ್​ಗೆ ಸೋಲುಣಿಸಿದ್ದಾರೆ. ನಾರ್ವೆಯಲ್ಲಿ ನಡೆಯುತ್ತಿರುವ ಚೆಸ್ ಟೂರ್ನಿಯ 6ನೇ ಸುತ್ತಿನ ಕ್ಲಾಸಿಕ್ ಪಂದ್ಯದಲ್ಲಿ ಗುಕೇಶ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಗುಕೇಶ್ ಕಾರ್ಲ್ಸನ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆ ಸೋಲಿನ ನಂತರ, ಕಾರ್ಲ್ಸನ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿ, “ನೀವು ರಾಜನ ವಿರುದ್ಧ ಆಡುವಾಗ, ನೀವು ತಪ್ಪಿಸಿಕೊಳ್ಳಬಾರದು” ಎಂದು ಕಾಲೆಳೆದಿದ್ದರು.

    ಈ ಸಂದೇಶವು ಮ್ಯಾಗ್ನಸ್ ಕಾರ್ಲ್ಸನ್ ಅವರ ಪ್ರಾಬಲ್ಯದ ಸಂಕೇತವಾಗಿತ್ತು. ಆದರೆ ಆರನೇ ಸುತ್ತಿನಲ್ಲಿ ಗುಕೇಶ್ ಅದಕ್ಕೆ ಸೂಕ್ತ ಉತ್ತರವನ್ನು ನೀಡಿದರು. ಬಿಳಿ ಕಾಯಿಗಳೊಂದಿಗೆ ಆಡಿದ 19 ವರ್ಷದ ಗುಕೇಶ್ ಆಟದ ಉದ್ದಕ್ಕೂ ತಾಳ್ಮೆ ಮತ್ತು ಶಿಸ್ತನ್ನು ತೋರಿಸಿದರು. 

   ಅತ್ತ ಕಾರ್ಲ್‌ಸನ್ ಪಂದ್ಯದ ಬಹುಪಾಲು ಮುನ್ನಡೆ ಕಾಯ್ದುಕೊಂಡರೂ, ಪಂದ್ಯಾವಳಿಯ ಹೆಚ್ಚುತ್ತಿರುವ ಸಮಯ ನಿಯಂತ್ರಣದ ಸಮಯದಲ್ಲಿ ಒತ್ತಡಕ್ಕೆ ಒಳಗಾದರು. ಈ ಅವಕಾಶವನ್ನು ಬಳಸಿಕೊಂಡ ಗುಕೇಶ್, ಕಾರ್ಲನ್ಸ್​ ಅವರ ಮೇಲೆ ಮತ್ತಷ್ಟು ಒತ್ತಡ ಹೇರಿದರು. ಈ ಒತ್ತಡದಿಂದಾಗಿ ಮ್ಯಾಗ್ನಸ್ ಕಾರ್ಲ್ಸನ್ ತಪ್ಪು ಹೆಜ್ಜೆಯನ್ನಿಟ್ಟರೆ, ಗುಕೇಶ್ ನಿಖರವಾದ ಪ್ರತಿದಾಳಿಯೊಂದಿಗೆ ಗೆಲುವು ಸಾಧಿಸಿದರು.

    19 ವರ್ಷದ ಗುಕೇಶ್ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಮ್ಯಾಗ್ನಸ್ ಕಾರ್ಲ್ಸನ್ ಸಾಧ್ಯವಾಗಲಿಲ್ಲ. ಅಲ್ಲದೆ ಆಘಾತಕಾರಿ ಸೋಲಿನಿಂದ ವಿಚಲಿತರಾದ ಕಾರ್ಲ್ಸನ್ ಪಂದ್ಯದ ನಂತರ ಮೇಜನ್ನು ಗುದ್ದುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದರು. 

   ಇನ್ನು ಮ್ಯಾಗ್ನಸ್ ಕಾರ್ಲ್ಸನ್ ಅವರ ಈ ಸೋಲನ್ನು ಅವರ ವೃತ್ತಿಜೀವನದ ಅತಿದೊಡ್ಡ ಸೋಲುಗಳಲ್ಲಿ ಒಂದು ಖ್ಯಾತ ಚೆಸ್ ಗ್ರ್ಯಾಂಡ್ ಮಾಸ್ಟರ್ ಸುಸಾನ್ ಪೋಲ್ಗರ್ ವಿಮರ್ಶಿಸಿದ್ದಾರೆ. ಅದೇ ಸಮಯದಲ್ಲಿ, ನಾರ್ವೆ ಚೆಸ್‌ ಟೂರ್ನಿಯಲ್ಲಿ  ಎರಡನೇ ಬಾರಿಗೆ, ಭಾರತೀಯ ಆಟಗಾರನೊಬ್ಬ ಕ್ಲಾಸಿಕ್ ಸ್ವರೂಪದಲ್ಲಿ ಕಾರ್ಲ್ಸನ್ ಅವರನ್ನು ಸೋಲಿಸಿದ್ದಾರೆ. 

   ಇದಕ್ಕೂ ಮುನ್ನ ಕಳೆದ ವರ್ಷ ಆರ್ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಇದೀಗ ಡಿ ಗುಕೇಶ್ ಕೂಡ ವಿಶ್ವದ ನಂಬರ್ 1 ಚೆಸ್ ಚತುರನ ವಿರುದ್ಧ ಸ್ಮರಣೀಯ ಗೆಲುವು ಸಾಧಿಸಿದ್ದಾರೆ.

Recent Articles

spot_img

Related Stories

Share via
Copy link