ಬೆಂಗಳೂರು : ಎಪಿಎಸ್ ಗೆ ಎನ್.ಬಿ.ಎ ಮಾನ್ಯತೆ….!

ಬೆಂಗಳೂರು:

    60 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಎಪಿಎಸ್ ಗೆ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಶನ್ (ಎನ್.ಬಿ.ಎ) ಮಾನ್ಯತೆ ದೊರೆತಿದೆ. ಎಪಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಕಾರ್ಯಕ್ರಮಗಳಿಗೆ ಮುಂದಿನ ಮೂರು ವರ್ಷಗಳಿಗೆ ಮಾನ್ಯತೆ ದೊರೆತಿದೆ. 

   ಈ ಸಾಧನೆಯು ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರಿಡಿಟೇಶನ್ ಕೌನ್ಸಿಲ್ (ಎನ್ಎಎಸಿ) ಯಶಸ್ವಿ ಮಾನ್ಯತೆಯ ನಂತರ ಬಂದಿದೆ. ಸಂಸ್ಥೆಯು ಉನ್ನತ-ತಂತ್ರಜ್ಞಾನ ಶಿಕ್ಷಣ ನೀಡಲು ಬದ್ಧವಾಗಿದ್ದು, 3ಡಿ ಪ್ರಿಂಟಿಂಗ್ ಲ್ಯಾಬ್, ರೋಬೋಟಿಕ್ಸ್ ಲ್ಯಾಬ್ ಮತ್ತು ವಿ.ಎಲ್.ಎಸ್.ಐ. ಲ್ಯಾಬ್ ಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಬರುವ 2025-26 ನೇ ಸಾಲಿಗೆ ಎಪಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪ್ರವೇಶಕ್ಕೆ ಅವಕಾಶವಿದೆ. 

   ಸಿಲಿಕಾನ್ ಇಂಡಿಯಾ ಎಜುಕೇಶನ್ ಮ್ಯಾಗಜೀನ್ ನ ಸಮೀಕ್ಷೆಯ ಪ್ರಕಾರ, ಎಪಿಎಸ್ ಪಬ್ಲಿಕ್ ಸ್ಕೂಲ್ ಬೆಂಗಳೂರಿನ ಅತ್ಯುತ್ತಮ ಐಸಿಎಸ್ಇ ಶಾಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ.ಇಲ್ಲಿ ವಿಜ್ಞಾನ, ವಾಣಿಜ್ಯ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಗ್ರ ಶಿಕ್ಷಣ ನೀಡಲಾಗು ತ್ತಿದೆ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link