ಬೆಂಗಳೂರು:
ಝೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಕನ್ನಡ ಸೀಸನ್ 21 ರಲ್ಲಿ ಸ್ಪರ್ಧಿಸಿರುವ ದ್ಯಾಮೇಶ್, ತಮ್ಮ ಹೃದಯಸ್ಪರ್ಶಿ ಜೀವನ ಕಥೆಯ ಮೂಲಕ ಲಕ್ಷಾಂತರ
ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಕಾರಟಗಿಯ ಈ ಯುವ ಪ್ರತಿಭೆ, ಕುಟುಂಬದ ಎಲ್ಲ ಸದಸ್ಯರನ್ನು ಕಳೆದುಕೊಂಡರೂ ತನ್ನನ್ನು ತಾನು ನಂಬಿಕೊಂಡು ಹೂ ವ್ಯಾಪಾರದ ಮೂಲಕ ಜೀವನ
ಸಾಗಿಸುತ್ತಿದ್ದಾರೆ. ಸಂಗೀತದೊಂದಿಗೆ ಅವರ ತಾಳ್ಮೆ, ಧೈರ್ಯ ಮತ್ತು ಆತ್ಮವಿಶ್ವಾಸ ಇವತ್ತಿನ ಯುವಕರಿಗೆ ಪ್ರೇರಣೆಯಾಗಿದೆ.ದ್ಯಾಮೇಶ್ ಅವರ ಈ ಅಪೂರ್ವ ಶ್ರದ್ಧೆ ಹಾಗೂ ಪ್ರತಿಭೆಗೆ ಗೌರವ ಸೂಚನೆಗಾಗಿ, ಮಿಲ್ಲೆಕ್ಸ್ ಸಂಸ್ಥೆ ವತಿಯಿಂದ ರೂ. 1 ಲಕ್ಷ ಪ್ರೋತ್ಸಾಹಧನವನ್ನು ಘೋಷಿಸಿದೆ. ಈ ಮೊತ್ತವನ್ನು ಯಾವುದೇ ದಾನ ಅಥವಾ ಸಹಾಯಧನವಾಗಿ ನೀಡಲಾಗಿಲ್ಲ. ಇದು ಅವರ ಪ್ರತಿಭೆಗೆ
ಮೌಲ್ಯಮಾಪನವಾಗಿದೆ ಮತ್ತು ಅವರು ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯುವಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಪ್ರೋತ್ಸಾಹಧನವನ್ನು ನೀಡಲಾಗಿದೆ. ಸಮಾನಂ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಮಿಲ್ಲೆಕ್ಸ್ ಸಂಸ್ಥೆಯ) ಸಿಇಒ ಶ್ರೀ ನಾರಾಯಣ್
ಅವರು ಈ ಸಂದರ್ಭದಲ್ಲಿ ಹೇಳಿದಂತೆ “ದ್ಯಾಮೇಶ್ ಅವರ ಕಥೆ ನಮ್ಮೆಲ್ಲರ ಹೃದಯ ಸ್ಪರ್ಶಿಸಿದೆ. ನಮ್ಮ ಸಂಸ್ಥೆ ಸದಾ ನೈಜ ಪ್ರತಿಭೆಗಳ ಬೆಂಬಲಕ್ಕೆ ಬದ್ಧವಾಗಿರುತ್ತದೆ. ಈ ಪ್ರೋತ್ಸಾಹಧನ ಅವರ ಮುಂದಿನ ಸಂಗೀತ ಪ್ರಯಾಣದಲ್ಲಿ ಹೊಸ ಮೆಟ್ಟಿಲು ಇರಲಿ ಎಂಬುದು
ನಮ್ಮ ಆಶಯ.”ಇಂತಹ ನೈಜ ಪ್ರತಿಭೆಗಳಿಗೆ ಬೆಂಬಲ ನೀಡುವುದು ಕೇವಲ ಹೊಣೆಗಾರಿಕೆ ಅಲ್ಲ, ಅದು ಮಾನವೀಯತೆಯ ಅತ್ಯುತ್ತಮ ರೂಪ – ದ್ಯಾಮೇಶ್ ಅವರ ಪ್ರಗತಿ ನಮ್ಮೆಲ್ಲರ ಗೆಲುವಾಗಲಿ.








