ಚುನಾವಣೆಗೂ ಮುನ್ನ ಬಂಪರ್‌ ಗಿಫ್ಟ್‌ ಕೊಟ್ಟ ನಿತೀಶ್‌ ಕುಮಾರ್‌

ಪಟನಾ: 

     ಮುಂದಿನ ವರ್ಷ ಚುನಾವಣೆ ಎದುರಿಸುತ್ತಿರುವ ಬಿಹಾರದಲ್ಲಿ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಎಲ್ಲಾ ಪ್ರಮುಖ ಪಕ್ಷಗಳು ಮತಪ್ರಭುಗಳನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದೆ. ಅದರಲ್ಲೂ ಆಡಳಿತರೂಢ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುಗಂತೂ ಈ ಚುನಾವಣೆ ಗೆಲ್ಲಲೇ ಬೇಕೆಂದು ಶತಾಯಗತಾಯ ಪ್ರಯತ್ನ‌ ನಡೆಸುತ್ತಿದೆ.

    ಇದರ ಭಾಗವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ರಾಜ್ಯ ಸರ್ಕಾರ ಪಿಂಚಣಿಯನ್ನು 400 ರೂ.ಗಳಿಂದ 1100 ರೂ.ಗಳಿಗೆ ಹೆಚ್ಚಿಸಿ ನಿತೀಶ್ ಕುಮಾರ್ ಶನಿವಾರ ಘೋಷಣೆ ಹೊರಡಿಸಿದ್ದಾರೆ. 2025 ರ ಅಂತ್ಯದ ವೇಳೆಗೆ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

   ಫಲಾನುಭವಿಗಳು ಜುಲೈ ತಿಂಗಳಿನಿಂದ ಹೆಚ್ಚಿದ ಪಿಂಚಣಿಯನ್ನು ಪಡೆಯುತ್ತಾರೆ ಮತ್ತು ನಂತರ ಪ್ರತಿ ತಿಂಗಳು 10 ನೇ ತಾರೀಖಿನಂದು ಖಾತೆಗೆ ಜಮಾ ಮಾಡಲಾಗುತ್ತದೆ. ಮುಖ್ಯಮಂತ್ರಿಗಳ ಪ್ರಕಾರ, ಪಿಂಚಣಿ ಹೆಚ್ಚಳವು 1 ಕೋಟಿ 9 ಲಕ್ಷ 69 ಸಾವಿರ 255 ಫಲಾನುಭವಿಗಳಿಗೆ ಸಹಾಯ ಮಾಡುತ್ತದೆ.. ವೃದ್ಧರು ಸಮಾಜದ ಅಮೂಲ್ಯ ಭಾಗವಾಗಿದ್ದು, ಅವರ ಗೌರವಾನ್ವಿತ ಜೀವನವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ರಾಜ್ಯ ಸರ್ಕಾರವು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮುಂದುವರಿಸುತ್ತದೆ” ಎಂದು ಮುಖ್ಯಮಂತ್ರಿ ಹೇಳಿದರು.

   243 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

Recent Articles

spot_img

Related Stories

Share via
Copy link