ಮಹಾನ್ ಪರಿವರ್ತನೆ ಎಂದಿಗೂ ಕಾಂಗ್ರೆಸ್‌ ಕಣ್ಣಿಗೆ ಕಾಣಲಿಲ್ಲ :ಪ್ರಹ್ಲಾದ್ ಜೋಶಿ

ಬೆಂಗಳೂರು:

    ಕಾಂಗ್ರೆಸ್ ಪಕ್ಷ ವಿದೇಶಿ ನೆಲದಲ್ಲಿ ದೇಶದ ವಿರುದ್ಧ ಮಾತನಾಡುವ ಬದಲು, ದೇಶದಲ್ಲಿನ ಅರ್ಥವಾದ ಪ್ರಗತಿಯ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ.

    ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮೇಕ್ ಇನ್ ಇಂಡಿಯಾ’ವನ್ನು ಕಾಂಗ್ರೆಸ್ ನಾಯಕರು ಮತ್ತು ಅವರ ವಿದೇಶಿ ಬೆಂಬಲಿಗರು ಟೀಕಿಸುತ್ತಲೇ ಬಂದಿದ್ದಾರೆ. ದೇಶದಲ್ಲಿ ತಂದಿರುವ ಮಹಾನ್ ಪರಿವರ್ತನೆ ಎಂದಿಗೂ ಇವರ ಕಣ್ಣಿಗೆ ಕಾಣಲಿಲ್ಲ. ಪ್ರಮುಖ ಆಮದುದಾರರ ದೇಶವಾಗಿದ್ದ ಭಾರತ,‌ ಇಂದು ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಶಕ್ತಿ ಕೇಂದ್ರವಾಗಿದೆ.

   ದೇಶದಲ್ಲಿ ತಯಾರಾದ ಮೊಬೈಲ್ ಫೋನ್ ರಫ್ತು 2014-15 ರಲ್ಲಿ ಕೇವಲ ₹1,566 ಕೋಟಿಯಿಂದ 2023-24 ರಲ್ಲಿ ₹1.2 ಲಕ್ಷ ಕೋಟಿಗೆ‌ ತಲುಪಿದೆ. ಇದು 77 ಪಟ್ಟು ಹೆಚ್ಚಳವಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ರಫ್ತು USD 38 ಶತಕೋಟಿ ದಾಟಿದ್ದು, ವರ್ಷದಿಂದ ವರ್ಷಕ್ಕೆ 32% ಬೆಳವಣಿಗೆಯನ್ನು ಸಾಧಿಸಿದೆ. ಕಾಂಗ್ರೆಸ್ ಪಕ್ಷ ವಿದೇಶಿ ನೆಲದಲ್ಲಿ ದೇಶದ ವಿರುದ್ಧ ಮಾತನಾಡುವ ಬದಲು, ದೇಶದಲ್ಲಿನ ಅರ್ಥವಾದ ಪ್ರಗತಿಯ ಬಗ್ಗೆ ಮಾತನಾಡುವುದು ಒಳ್ಳೆಯದು. ಅವರ ವಾಗ್ಮೀತನದ ಮುಂದೆ ಸತ್ಯಗಳು ಜೋರಾಗಿ ಪ್ರತಿಧ್ವನಿಸುತ್ತದೆ ಎಂದಿದ್ದಾರೆ.

Recent Articles

spot_img

Related Stories

Share via
Copy link