KR ಮಾರ್ಕೆಟ್‌‌ಗೆ ಹೈಟೆಕ್‌ ಸ್ಪರ್ಶ : ರಸ್ತೆಬದಿಯ ವ್ಯಾಪಾರಕ್ಕೆ ಬ್ರೇಕ್‌

ಬೆಂಗಳೂರು: 

    ರಾಜಧಾನಿ ಬೆಂಗಳೂರಿನ ಕೆ.ಆರ್ ಮಾರ್ಕೆಟ್‌‌ಗೆ ಹೈಟೆಕ್ ಸ್ಪರ್ಶ ಕೊಡಲು ಪಾಲಿಕೆ ಮುಂದಾಗಿದೆ. ಕಸದ ಕೊಂಪೆಯಾಗಿ ಸಂಚಾರಕ್ಕೂ ಸಂಚಕಾರ ಆಗಿರುವ ಮಾರುಕಟ್ಟೆಯನ್ನ ಸುಸಜ್ಜಿತಗೊಳಿಸಲು ಸಜ್ಜಾಗಿದೆ. ಹಾಗಾದ್ರೆ ಬಿಬಿಎಂಪಿ ಪ್ಲ್ಯಾನ್ ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

    ಕೆ .ಆರ್‌. ಮಾರ್ಕೆಟ್‌‌‌, ಬೆಂಗಳೂರಿನ ಅತಿದೊಡ್ಡ ಮಾರುಕಟ್ಟೆ. ಹೂವಿನ ಸಾಮ್ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿತ್ಯ ಸಾವಿರಾರು ಗ್ರಾಹಕರು ಇಲ್ಲಿಗೆ ಬರ್ತಾರೆ. ಆದರೆ ಇಲ್ಲಿ ಮಾತ್ರ ಅವ್ಯಸ್ಥೆ ತಾಂಡವಾಡ್ತಿದೆ. ಎಲ್ಲೆಂದರಲ್ಲಿ ವ್ಯಾಪಾರ, ಕಂಡಲ್ಲೆಲ್ಲಾ ಕಸದ ರಾಶಿಗಳಿಂದ ಜನ್ರ ಓಡಾಟಕ್ಕೆ ಅಡಚಣೆ ಆಗ್ತಿದೆ. ಒಮ್ಮೆ ಮಾರ್ಕೆಟ್‌ ಒಳಗೆ ಬಂದು ಹೋಗೋದ್ರೊಳಗೆ ಸುಸ್ತಾಗಿ ಹೋಗ್ತಾರೆ. ಅಲ್ಲದೇ ಬೆಳ್‌‌ ಬೆಳಗ್ಗೆ ಕೆಆರ್ ಮಾರ್ಕೆಟ್ ಫ್ಲೈಓವರ್ ಕೆಳಭಾಗದಲ್ಲೇ ವ್ಯಾಪಾರ ವಹಿವಾಟು ಮಾಡಲಾಗ್ತಿದೆ. ಸದ್ಯ ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ ನೀಡಿ ಇವೆಲ್ಲದಕ್ಕೂ ಬ್ರೇಕ್‌ ಹಾಕಲು ಮುಂದಾಗಿದೆ ಬಿಬಿಎಂಪಿ.

ಹೈಟೆಕ್‌‌‌‌‌ KR ಮಾರ್ಕೆಟ್‌!

  • ಕಸ ವಿಲೇವಾರಿಗೆ ವಿಶೇಷ ತಂತ್ರಜ್ಞಾನ ಬಳಕೆ
  • ರಸ್ತೆ ಬದಿಯಲ್ಲಿನ ವ್ಯಾಪಾರಕ್ಕೆ ನಿಷೇಧ
  • ಸದ್ಯಕ್ಕಿರುವ ಕಟ್ಟಡಗಳ ನವೀಕರಣ
  • ಮಾರ್ಕೆಟ್‌ಗೆ 60 ಸಿಸಿಟಿವಿ ಕಣ್ಗಾವಲು
  • ತ್ಯಾಜ್ಯ ಮುಕ್ತ ಮಾಡಲು ವಿಶೇಷ ಕಾರ್ಯಪಡೆ
  • 2 ಶಿಫ್ಟ್‌‌ಗಳಲ್ಲಿ ಪೌರ ಕಾರ್ಮಿಕರು & ಮಾರ್ಷಲ್ಸ್ ನೇಮಕ
  • ಸಂಚಾರ ದಟ್ಟಣೆ ಆಗದಂತೆ ಕ್ರಮ
  • ಸೀಮಿತ ವರ್ತಕರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ
  • ವರ್ತಕರಿಂದ ಪರಿಷ್ಕೃತ ತೆರಿಗೆ ವಸೂಲಿ

     ಕೆಆರ್ ಮಾರುಕಟ್ಟೆಯಲ್ಲಿ ಕಸ ವಿಲೇವಾರಿಗೆ ವಿಶೇಷ ತಂತ್ರಜ್ಞಾನ ಬಳಕೆಗೆ ಮುಂದಾಗಿದ್ದು, ರಸ್ತೆ ಬದಿಯಲ್ಲಿನ ವ್ಯಾಪಾರಕ್ಕೆ ನಿಷೇಧ ಹೇರಲು ಮುಂದಾಗಿದೆ. ಸದ್ಯಕ್ಕಿರುವ ಕಟ್ಟಡಗಳ ನವೀಕರಣ ಮಾಡೋದ್ರ ಜೊತೆಗೆ ಇಡೀ ಮಾರ್ಕೆಟ್‌ಗೆ 60ಕ್ಕೂ ಅಧಿಕ ಸಿಸಿಟಿವಿ ಅವಳಡಿಸಲು ಮುಂದಾಗಿದೆ. ತ್ಯಾಜ್ಯ ಮುಕ್ತ ಮಾಡಲು ವಿಶೇಷ ಕಾರ್ಯಪಡೆ ನಿಯೋಜನೆ ಮಾಡ್ತಿದ್ದು, 2 ಶಿಫ್ಟ್‌‌ಗಳಲ್ಲಿ ಪೌರ ಕಾರ್ಮಿಕರು & ಮಾರ್ಷಲ್ಸ್ ಕೆಲ್ಸ ಮಾಡಲಿದ್ದಾರೆ. ಅಲ್ಲದೇ ಸಂಚಾರ ದಟ್ಟಣೆ ಆಗದಂತೆ ಕ್ರಮ ವಹಿಸಲಾಗ್ತಿದೆ. ಸೀಮಿತ ವರ್ತಕರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಿದ್ದು, ಪರಿಷ್ಕೃತ ತೆರಿಗೆ ವಸೂಲಿಗೂ ಸಜ್ಜಾಗಿದೆ.

   ಪಾಲಿಕೆ ಏನ್‌ ಬೇಕಾದ್ರೂ ಮಾಡಿಕೊಳ್ಳಲಿ. ಆದರೆ ನಮಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಿ ಅನ್ನೋದು ವರ್ತಕರ ಆಗ್ರಹ. ಒಟ್ಟಾರೆ ಹಾಳೂರಕೊಂಪೆಯಾಗಿರುವ ಕೆಆರ್ ಮಾರ್ಕೆಟ್‌ಗೆ ಹೊಸ ಲುಕ್ ಬರಲಿದೆ.. ಇದಕ್ಕೆಂದೇ ಪಾಲಿಕೆ ಟೆಂಡರ್ ಆಹ್ವಾನಿಸಿದ್ದು, ಶೀಘ್ರವೇ ಕಾಮಗಾರಿ ಶುರುವಾಗಲಿದೆ

Recent Articles

spot_img

Related Stories

Share via
Copy link