ಸರ್ಕಾರದ ಗ್ಯಾರಂಟಿಗಳು ಬಡವರ ಕೈಗೆ ಶಕ್ತಿ ತುಂಬಿವೆ: ಯೋಗೇಶ್ ಬಾಬು

ನಾಯಕನಹಟ್ಟಿ :

     ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಡವರ ಪರವಾಗಿ ಕಾರ್ಯಕ್ರಮಗಳನ್ನು ಸರ್ಕಾರ ಪಂಚಗ್ಯಾರೆಂಟಿ ಘೋಷಣೆ ಮಾಡಿ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಬಹಳಷ್ಟು ಮಹಿಳೆಯರು ಉದ್ಯೋಗಕ್ಕೆ, ಕೂಲಿ ಕಾರ್ಮಿಕರಿಗೆ ಸರ್ಕಾರಿ ಬಸ್ಸುಗಳು ಉಪಯೋಗವಾಗುತ್ತಿವೆ ಎಂದು ಕರ್ನಾಟಕ ದ್ರಾಕ್ಷಿ ನಿಗಮ ಮಂಡಳಿ ಅಧ್ಯಕ್ಷರಾದ ಡಾ.ಯೋಗೇಶ್ ಬಾಬು ಹೇಳಿದರು.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕರವೇ ಕನ್ನಡ ಸೇನೆ ವತಿಯಿಂದ ಉಚಿತ ಕಣ್ಣಿನ ಶಿಬಿರ ಹಮ್ಮಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು ಹೊರ ಜಗತ್ತನ್ನು ನೋಡುವುದಕ್ಕೆ ಆನಂದಿಸಬೇಕಾದರೆ ಜೋಪಾನವಾಗಿ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒತ್ತಡ ತೆಗೆದುಕೊಳ್ಳಬೇಡಿ, ಅರಾಮವಾಗಿರಿ. ದೇಹದ ಆರೋಗ್ಯ ರಕ್ಷಣೆಯ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಡಜನರಿಗೆ, ನಿರ್ಗತಿಕರಿಗೆ ಉಚಿತವಾಗಿ ಕಣ್ಣಿನ ಶಿಬಿರ ತಪಾಸಣೆ ಹಮ್ಮಿಕೊಂಡಿದ್ದು ಕನ್ನಡಸೇನೆಗೆ ಅಭಿನಂದನೆಗಳನ್ನು ಸಲ್ಲಿಸಿದರು. 

    ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೊಸ ಹೊಸ ಹೈಟೆಕ್ ಬಸ್ಸುಗಳನ್ನು ಬಿಟ್ಟಿದ್ದಾರೆ. ಅನೇಕ ಬಡ ಮಹಿಳೆಯರು ಪುಣ್ಯಕ್ಷೇತ್ರಗಳನ್ನು ನೋಡಿರಲಿಲ್ಲ, ತೀರ್ಥ ಯಾತ್ರೆಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ. ರಾಜ್ಯದ ಲಕ್ಷಾಂತರ ಮಹಿಳೆಯರು ಸಂಭ್ರದಲಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆಗಳನ್ನು ಬಿಜೆಪಿಯವರು ಸಹಿಸಿಕೊಳ್ಳದೆ ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಆಗಿನ ಬಿಜೆಪಿ ಸರ್ಕಾರ 100 ಕೋಟಿಗೆ 500 ಕೋಟಿ ಕಾಮಗಾರಿಗಳ ಕಾರ್ಯದೇಶ ನೀಡಿದ್ದರು ಗುತ್ತಿಗೆದಾರರು ಕಾಮಗಾರಿಗಳನ್ನು ನಿರ್ವಹಿಸದೆ ಇರುವ ಕಾರಣ ಅನೇಕ ಗುತ್ತಿಗೆದಾರರು ಬೀದಿಗೆ ಬರುವ ಪರಿಸ್ಥಿತಿಗೆ ಬಂದಿತ್ತು, ಅದಕ್ಕೆ ಬಿಜೆಪಿಯೇ ನೇರ ಹೊಣೆ ಆಗಿತ್ತು ಎಂದು ಆರೋಪಿಸಿದರು. 

    ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಿಂದ ಆರ್ಥಿಕವಾಗಿ ಜನರಿಗೆ, ಬಡವರಿಗೆ ಉಪಯೋಗವಾಗಲಿ ಎಂದು ನಿರುದ್ಯೋಗ ಯುವಕರಿಗೆ ಬಹಳ ಅನುಕೂಲವಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ, ಒಳ್ಳೆ ಬಜೆಟ್ ಮಂಡಿಸಿದ್ದಾರೆ. ಅನುದಾನಗಳನ್ನು ಕೊಟ್ಟು ಕೆಲಸಗಳು ನಡೆಯುತ್ತಿವೆ. ಗೃಹಲಕ್ಷ್ಮೀ ಹಣದಿಂದ ಕೆಲವರು ಬೋರ್‌ವೆಲ್ ಕೊರಿಸಿದ್ದಾರೆ, ಬೈಕ್‌ಗಳನ್ನು ಸಹ ಕೊಡಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ಅನುಕೂಲವಾಗಿದೆ. ಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ನಿರ್ಮಿಸಿದ್ದಾರೆ, ಬಂಗಾರವನ್ನು ಖರಿದಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. 

    ಕರ್ನಾಟಕ ದ್ರಾಕ್ಷಿ ನಿಗಮ ಮಂಡಳಿ ನಿಗಮದಿಂದ ಯುವಕ, ಯುವತಿಯರಿಗೆ ಆಸಕ್ತಿ ಇರುವಂತವರಿಗೆ ವೈನ್ ಶಿಕ್ಷಣ ಕೋರ್ಸ್ನ್ನು ವಿದೇಶದಲ್ಲಿ ಮಾಡಿಸಿದರೆ 20 ಸಾವಿರ ಖರ್ಚಾಗುತ್ತಿತ್ತು ನಮ್ಮಲ್ಲಿ ಉಚಿತವಾಗಿ ಮನೆಯಲಿಯೇ ಇದ್ದುಕೊಂಡು ಒಂದು ವಾರಗಳ ಕಾಲ ವೈನ್ ಶಿಕ್ಷಣ ಕೊಡಲಾಗುತ್ತದೆ ಎಂದು ಹೇಳಿದರು. 

    ಈ ಸಂದರ್ಭದಲ್ಲಿ ಉಪಸ್ಥಿತರಾದ ಕಾಂಗ್ರೆಸ್ ಮುಖಂಡರುಗಳಾದ ಬೊಸೆದೇವರಹಟ್ಟಿ ಬೊಸರಂಗಪ್ಪ, ಧನಂಜಯ, ದುರುಗಪ್ಪ, ಮಲ್ಲೂರಹಟ್ಟಿ ಗೌಡ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಹಾಲಿ ಸದಸ್ಯ ಕಾಟಯ್ಯ, ಮಾಜಿ ಗ್ರಾ.ಪಂ ಅಧ್ಯಕ್ಷ ಗೌಡಗೆರೆ ರಂಗಪ್ಪ, ತೊರೆಕೊಲಮ್ಮನಹಳ್ಳಿ ಆರ್.ಬಸವರಾಜ್, ಈ.ಮಧು, ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮುತ್ತಯ್ಯ, ಹೋಬಳಿ ಅಧ್ಯಕ್ಷ ಕೆ.ಜಿ.ಮಂಜುನಾಥ, ಕರವೇ ಕನ್ನಡ ಸೇನೆ ಮಹಿಳಾ ಹೋಬಳಿ ಅಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಮಂಜುನಾಥ, ಪ್ರೇಮ್‌ಕುಮಾರ್ ಕಾರ್ಯದರ್ಶಿ, ಪ್ರಸನ್ನ ಕುಮಾರ್ ವಿದ್ಯಾರ್ಥಿ ಘಟಕ ಕಾರ್ಯದರ್ಶಿ, ಭರತ್ ಪಾಟೇಲ್, ನಾಗರಾಜ, ಓ.ತಿಪ್ಪೇಶಸ್ವಾಮಿ ನಗರ ಘಟಕದ ಅಧ್ಯಕ್ಷ, ಶಿವಮೂರ್ತಿ ಮದರ್ ತೆರಿಸ್ಸ ಸಂಸ್ಥೆ ಸಂಸ್ಥಾಪಕರು, ಅರುಣ್‌ಕುಮಾರ್, ರಾಮಚಂದ್ರ ಶಂಕರ್ ಆಸ್ಪತ್ರೆ, ಡಾ.ಮೇಘನ, ವಿನೊಭ, ಅರ್ಪಿತ, ಚೇತನ್, ರಕ್ಷಿತ, ವಾಣಿ, ಶಿವಪ್ರಸಾದ್, ಚಿನ್ನಮಲ್ಲಯ್ಯ ಓ.ಎಂ ಅಧ್ಯಕ್ಷರು ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಆ್ಯಂಬುಲೆನ್ಸ್ ನೌಕರರ ಸಂಘ ತಾಲ್ಲೂಕು ಘಟಕ ಮೊಳಕಾಲ್ಮೂರು. ಹಾಗೂ ಇನ್ನೂ ಇತರರು ಇದ್ದರು. 

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಿಂದ ಆರ್ಥಿಕವಾಗಿ ಜನರಿಗೆ, ಬಡವರಿಗೆ ಉಪಯೋಗವಾಗಲಿ ಎಂದು ನಿರುದ್ಯೋಗ ಯುವಕರಿಗೆ ಬಹಳ ಅನುಕೂಲವಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ, ಒಳ್ಳೆ ಬಜೆಟ್ ಮಂಡಿಸಿದ್ದಾರೆ. ಅನುದಾನಗಳನ್ನು ಕೊಟ್ಟು ಕೆಲಸಗಳು ನಡೆಯುತ್ತಿವೆ. ಗೃಹಲಕ್ಷ್ಮೀ ಹಣದಿಂದ ಕೆಲವರು ಬೋರ್‌ವೆಲ್ ಕೊರಿಸಿದ್ದಾರೆ, ಬೈಕ್‌ಗಳನ್ನು ಸಹ ಕೊಡಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ಅನುಕೂಲವಾಗಿದೆ. ಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ನಿರ್ಮಿಸಿದ್ದಾರೆ, ಬಂಗಾರವನ್ನು ಖರಿದಿಸಿದ್ದಾರೆ ಎಂದು ಮಾದ್ಯಮದಲ್ಲಿ ನೋಡಿದ್ದೇವೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ.ಡಾ.ಯೋಗೇಶ್ ಬಾಬು, ಕರ್ನಾಟಕ ದ್ರಾಕ್ಷಿ ನಿಗಮ ಮಂಡಳಿ ಅಧ್ಯಕ್ಷರು

Recent Articles

spot_img

Related Stories

Share via
Copy link