ಮದುವೆಯಾದ ಎರಡೇ ತಿಂಗಳಲ್ಲಿ ಅತ್ತೆ ಜೊತೆಗೆ ಓಡಿಹೋದ ಅಳಿಯ!

ದಾವಣಗೆರೆ:

   ಅಳಿಯನ ಜೊತೆ ಅತ್ತೆ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಎರಡು ತಿಂಗಳ ಹಿಂದೆ ಮದುವೆಯಾಗಿ ದಾಂಪತ್ಯ ಜೀವನದ ಕನಸು ಕಾಣುತ್ತಿದ್ದ ಯುವತಿಗೆ ಹೆತ್ತ ತಾಯಿಯೇ ಆ ಮೂಲಕ ಕಂಟಕಳಾಗಿದ್ದಾಳೆ. ಮದುವೆ ನಡೆದ 15 ದಿನಕ್ಕೇ 55 ವರ್ಷದ ಅತ್ತೆಯ ಜೊತೆಗೆ ಅಳಿಯ ಅಕ್ರಮ ಸಂಬಂಧ ಬೆಳೆಸಿದ್ದು, ಇವರಿಬ್ಬರ ಸರಸದ ವಿಡಿಯೋಗಳನ್ನು ಕಂಡು ಮಗಳೇ ಶಾಕ್‌ ಆಗಿದ್ದಾಳೆ.

    55 ವರ್ಷದ ಶಾಂತ ಹಾಗೂ 25 ವರ್ಷದ ಗಣೇಶ್ ಪರಾರಿಯಾದವರು. ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ನಿವಾಸಿ ಶಾಂತ, ನಾಗರಾಜ್ ಎಂಬವರನ್ನು 13 ವರ್ಷಗಳ ಹಿಂದೆ 2ನೇ ಮದುವೆಯಾಗಿದ್ದಳು. ನಾಗರಾಜ್‌ಗೆ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಆ ಪೈಕಿ ಹೇಮಾಳಿಗೆ ಶಾಂತಾಳೇ ಹುಡುಗನನ್ನು ಹುಡುಕಿ ಮದುವೆ ಮಾಡಿದ್ದಳು. ನಂತರ ಶಾಂತಾಗೆ ಅಳಿಯನ ಜೊತೆ ರೀಲ್ಸ್ ಮಾಡುವ ಖಯಾಲಿ ಶುರುವಾಗಿದೆ. ಬರಬರುತ್ತಾ ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಹತ್ತಿರವಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ತಮ್ಮ ಸರಸದ ದೃಶ್ಯಗಳನ್ನು ವಿಡಿಯೋ ಸಹ ಮಾಡಿದ್ದಾರೆ.

   ಮೊಬೈಲ್‌ನಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳನ್ನು ನೋಡಿ ಮಗಳು ಶಾಕ್ ಆಗಿದ್ದಾಳೆ. ಇವರಿಬ್ಬರ ಬಣ್ಣ ಬಯಲಾಗುತ್ತಿದ್ದಂತೆ ಹಣ, ಆಭರಣ ಕದ್ದುಕೊಂಡು ಗಣೇಶ್ ಜೊತೆ ಶಾಂತ ಪರಾರಿಯಾಗಿದ್ದಾಳೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link