ಬೆಂಗಳೂರು : ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ..!

ಬೆಂಗಳೂರು:

     ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಜೂನ್ 29 ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತಿಳಿಸಿದೆ . ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಕಡಿತ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಸಮಯದಲ್ಲಿ ತುಸು ಬದಲಾವಣೆ ಇರಬಹುದು. ನಿಗದಿತ ತ್ರೈಮಾಸಿಕ ನಿರ್ವಹಣಾ ಕಾರ್ಯಗಳು ಮತ್ತು ನಿರ್ವಹಣಾ ಕಾಮಗಾರಿಯ ಕಾರಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ಇದು 66/11 ಕಿಲೋವೋಲ್ಟ್ (ಕೆವಿ) ಎ ಸ್ಟೇಷನ್ ಅಡಿಯಲ್ಲಿ ಬರುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. 

   ವಾರಾಂತ್ಯದಲ್ಲಿ ಗ್ರಿಡ್ನಲ್ಲಿ ಒಟ್ಟಾರೆ ವಿದ್ಯುತ್ ಬಳಕೆಯ ಹೊರೆ ಗಮನಾರ್ಹವಾಗಿ ಕಡಿಮೆಯಾದ ಸಂದರ್ಭದಲ್ಲೇ ಬೆಸ್ಕಾಂ ವಿದ್ಯುತ್ ಕಡಿತ ಯೋಜಿಸುಗತ್ತಿದೆ. ಆ ಮೂಲಕ ಕಚೇರಿ ಕೆಲಸಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

   ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, ಶೇಷಾದ್ರಿ ರಸ್ತೆ, ಕುರುಬರ ಸಂಘದ ವೃತ್ತ 1ನೇ ಮುಖ್ಯರಸ್ತೆ, ಗಾಂಧಿ ನಗರ 1ನೇ ಕ್ರಾಸ್ ಮತ್ತು 2ನೇ ಕ್ರಾಸ್ ಭಾಗಗಳು, ಕ್ರೆಸೆಂಟ್ ರಸ್ತೆ, ಶೇಷಾದ್ರಿಪುರಂ, ವಿನಾಯಕ ವೃತ್ತ, ಕೆಂಪೇಗೌಡ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಸುಬೇದಾರ್ ಛತ್ರಂ ರಸ್ತೆ, ಲಕ್ಷ್ಮಣಪುರಿ ಸ್ಲಂ ಏರಿಯಾ, ಕಬ್ಬನ್ಪೇಟೆ, ಚಲುಕೂರ್ಪೇಟೆ, ಚಲುಕೂರ್ಪೇಟೆ, ಸಿ.ಸಿ. ಹೈಗ್ರೌಂಡ್ಸ್, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

   ಜೂನ್ 24 ರಂದು ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿತ್ತು. ಬೆಸ್ಕಾಂ ಮತ್ತು ಕೆಪಿಟಿಸಿಎಲ್ನಂತಹ ವಿದ್ಯುತ್ ಪೂರೈಕೆದಾರರು ವಿವಿಧ ಯೋಜನೆಗಳ ಅನುಷ್ಠಾನ ಕಾಮಗಾರಿ ಮತ್ತು ನಿರ್ವಹಣಾ ಕಾಮಗಾರಿಗಳ ಪ್ರಯುಕ್ತ ನಗರದಾದ್ಯಂತ ವಿವಿಧ ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಮಾಡುತ್ತವೆ. ಮರಗಳನ್ನು ಅಥವಾ ಗೆಲ್ಲುಗಳನ್ನು ಕಡಿಯುವುದು, ಓವರ್ಹೆಡ್ ಕೇಬಲ್ಗಳ ಅಂಡರ್ಗ್ರೌಂಡ್ ಕಾಮಗಾರಿ, ಜಲಸಿರಿ 24×7 ನೀರು ಸರಬರಾಜು ಯೋಜನೆ, ಹೈ-ಟೆನ್ಷನ್ (ಎಚ್ಟಿ) ಲೈನ್ಗಳ ರಿಕಂಡಕ್ಟರಿಂಗ್, ಆರ್ಎಂಯು ಸೇವೆ, ಎಚ್ಟಿ ಸಂಪರ್ಕಗಳನ್ನು ದುರಸ್ತಿ ಮಾಡುವುದು ಮತ್ತು ಬದಲಾಯಿಸುವುದು, ಸಿಸ್ಟಮ್ ನವೀಕರಣಗಳು ಮತ್ತು ಇತರ ಅಗತ್ಯ ದುರಸ್ತಿಗಳಿಗಾಗಿ ವಿದ್ಯುತ್ ಕಡಿತ ಮಾಡಲಾಗುತ್ತದೆ.

Recent Articles

spot_img

Related Stories

Share via
Copy link