ಮುಂಬೈ :
ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿರುವ ಯಶ್ ಬಳಿ ಹಲವಾರು ಐಶಾರಾಮಿ ಕಾರುಗಳಿವೆ. ಇದೀಗ ತಮ್ಮ ಕಾರು ಸಂಗ್ರಹಕ್ಕೆ ಹೊಸ ಕಾರೊಂದನ್ನು ಸೇರಿಸಿಕೊಂಡಿದ್ದಾರೆ ನಟ ಯಶ್. ಕೋಟ್ಯಂತರ ಹಣ ನೀಡಿ ಹೊಸ ಕಾರನ್ನು ಯಶ್ ಖರೀದಿ ಮಾಡಿದ್ದಾರೆ. ಯಶ್ ಖರೀದಿ ಮಾಡಿರುವ ಐಶಾರಾಮಿ ಕಾರಿನಷ್ಟೆ ಆ ಕಾರಿನ ಸಂಖ್ಯೆ ಸಹ ಗಮನ ಸೆಳೆಯುತ್ತಿದೆ.
ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ‘ಕೆಜಿಎಫ್’ ಮೂಲಕ ಸಿಕ್ಕ ಗೆಲುವನ್ನು ಬಳಸಿಕೊಂಡು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಭಾರತದ ಅತ್ಯುತ್ತಮ ಪ್ರಾಜೆಕ್ಟ್ಗಳಲ್ಲಿ ಯಶ್ ನಟಿಸುತ್ತಿದ್ದಾರೆ. ದೊಡ್ಡ-ದೊಡ್ಡ ಪ್ರಾಜೆಕ್ಟ್ಗಳ ಮೇಲೆ ಬಂಡವಾಳ ಹೂಡಿದ್ದಾರೆ. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಯಶ್, ಅವರ ಸಂಭಾವನೆಗೆ ತಕ್ಕಂತೆ ಐಶಾರಾಮಿ ಜೀವನಶೈಲಿಯನ್ನೂ ಅಳವಡಿಸಿಕೊಂಡಿದ್ದಾರೆ. ಐಶಾರಾಮಿ ಮನೆ, ಕಾರುಗಳಂತೂ ಸಾಕಷ್ಟಿವೆ. ಇದೀಗ ಅವರು ಹೊಸದೊಂದು ಕಾರೊಂದನ್ನು ಖರೀದಿ ಮಾಡಿದ್ದಾರೆ. ಕಾರಿನಷ್ಟೆ, ಕಾರಿನ ನಂಬರ್ ಪ್ಲೇಟ್ ಸಹ ಗಮನ ಸೆಳೆಯುತ್ತಿದೆ.
ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಹೆಚ್ಚಿನ ಸಮಯವನ್ನು ಯಶ್ ಕಳೆಯುತ್ತಿದ್ದು, ಅಲ್ಲಿನ ಓಡಾಟಕ್ಕಾಗಿ ಎಂದು ಒಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ ಯಶ್. ರಣ್ಬೀರ್ ಕಪೂರ್, ಶಾರುಖ್ ಖಾನ್ ಅಂಥಹಾ ಸ್ಟಾರ್ ಹೀರೋಗಳ ಮಾತ್ರವೇ ಇರುವ ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರನ್ನು ಯಶ್ ಖರೀದಿ ಮಾಡಿದ್ದಾರೆ. ಈ ಕಾರು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಅದ್ಭುತವಾದ ಕಂಫರ್ಟ್ ಅನ್ನು ಪ್ರಯಾಣಿಸುವವರಿಗೆ ನೀಡುತ್ತದೆ. ಬೆಲೆಯೂ ಸಹ ಭಾರಿ ದುಬಾರಿ.
ಯಶ್ ಖರೀದಿ ಮಾಡಿರುವ ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರಿನ ಬೆಲೆ ಸುಮಾರು 3 ಕೋಟಿ ಇದೆ (ಆನ್ ರೋಡ್) ಈ ಕಾರಿನ ಎಕ್ಸ್ ಶೋರೂಂ ಬೆಲೆಯೇ 2.65 ಕೋಟಿ ರೂಪಾಯಿಗಳಿದೆ. ನೀಲಿ ಬಣ್ಣದ ಕಾರನ್ನು ಯಶ್ ಖರೀದಿ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಈ ಕಾರಿನ ನೊಂದಣಿ ಆಗಿದೆ. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಕಾರಿನ ನೊಂದಣಿಯನ್ನು ನಟ ಯಶ್ ಮಾಡಿಸಿದ್ದಾರೆ.
ಕಾರಿನ ಸಂಖ್ಯೆ ಕಾರಿನಷ್ಟೆ ಗಮನ ಸೆಳೆಯುತ್ತಿದೆ. ಯಶ್ ಖರೀದಿಸಿರುವ ಕಾರಿನ ಸಂಖ್ಯೆ ಎಂಎಚ್ 47 ಸಿಬಿ 8055 (MH47CB8055) ಎಂದಿದೆ. 8055 ಸಂಖ್ಯೆಯನ್ನು ‘ಬಾಸ್’ ಸಂಖ್ಯೆ ಎಂದು ಕರೆಯಲಾಗುತ್ತದೆ. 8055 ಸಂಖ್ಯೆ ನೋಡಲು ಇಂಗ್ಲೀಷ್ನ BOSS ನಂತೆ ಕಾಣುತ್ತದೆಯಾದ್ದರಿಂದ ಈ ಸಂಖ್ಯೆಗೆ ಬಾಸ್ ಸಂಖ್ಯೆ ಎಂದು ಹೆಸರು. ಮಾತ್ರವಲ್ಲದೆ ಈ 8055 ಸಂಖ್ಯೆ ಬಲು ದುಬಾರಿ ಸಹ ಹೌದು. ಲಕ್ಷಾಂತರ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡಿ 8055 ಸಂಖ್ಯೆಯನ್ನು ಆರ್ಟಿಓ ಯಿಂದ ಖರೀದಿ ಮಾಡಬೇಕು. ಯಶ್ರ ಎಲ್ಲ ಕಾರುಗಳ ಸಂಖ್ಯೆಯೂ 8055 ಆಗಿದೆ. ಅಂದಹಾಗೆ ಯಶ್ ಈಗ ಖರೀದಿ ಮಾಡಿರುವ ಲೆಕ್ಸಸ್ ಕಾರು ಅವರ ನಿರ್ಮಾಣ ಸಂಸ್ಥೆಯಾದ ಮಾನ್ಸ್ಟರ್ ಮೈಂಡ್ಸ್ ಹೆಸರಿನಲ್ಲಿ ನೊಂದಣಿ ಆಗಿದೆ.
