ದಾವಣಗೆರೆ:
ನಗರದ ಮನೆಯೊಂದರಲ್ಲಿ ಇಂದು (ಜು.೧) ಬೆಳಗಿನ ಜಾವ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಇಡೀ ಮನೆ ಸುಟ್ಟು ಭಸ್ಮವಾಗಿದ್ದು, ತಾಯಿ-ಮಗ ಸಾ*ವನ್ನಪ್ಪಿದ್ದಾರೆ.
ಇಡೀ ಮನೆಗೆ ಆವರಿಸಿದ ಬೆಂಕಿ ನಗರದ ಕಾಯಿಪೇಟೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ವಿದ್ಯುತ್ ಶಾರ್ಟ್ ಸರ್ಕೀಟ್ ಸಂಭವಿಸಿದ್ದು, ಇಡೀ ಮನೆಗೆ ಬೆಂಕಿ ಆವರಿಸಿಕೊಂಡಿದೆ. ದಟ್ಟ ಹೊಗೆ, ಬೆಂಕಿಯ ಕೆನ್ನಾಲೆಗೆ ತಾಯಿ ವಿಮಲಾ (೭೫) ಹಾಗೂ ಅವರ ಪುತ್ರ ಕುಮಾರ (೩೫) ಮೃ*ತಪಟ್ಟಿದ್ದಾರೆ. ಮನೆಯ ವಿದ್ಯುತ್ ವೈರ್, ಫ್ಯಾನ್, ಸೋಫಾ, ಆಲಂಕಾರಿಕ ವಸ್ತುಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಯಲ್ಲಿ ಒಟ್ಟು ಆರು ಜನ ಇದ್ದು, ನಾಲ್ವರು ಮನೆಯಿಂದ ಹೊರ ಬಂದಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ರುದ್ರಮುನಿಸ್ವಾಮಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ನಸುಕಿನ ಹೊತ್ತಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿದೆ. ನೋಡ ನೋಡುತ್ತಲೇ ಇಡೀ ಮನೆಯನ್ನು ಬೆಂಕಿ ಆವರಿಸಿಕೊಂಡಿದೆ. ಮನೆಯಲ್ಲಿದ್ದ ಆರು ಜನರಲ್ಲಿ ನಾಲ್ವರು ಹೊರಬಂದಿದ್ದಾರೆ. ದಟ್ಟ ಹೊಗೆ, ಬೆಂಕಿ ಕೆನ್ನಾಲೆಯಿಂದ ತಾಯಿ ಮತ್ತು ಮಗ ಹೊರಬರಲು ಸಾಧ್ಯವಾಗದೇ ಮೃ*ತಪಟ್ಟಿದ್ದಾರೆ.
ಬೆಂಕಿ ನಂದಿಸಿದ ಅಗ್ನಿಶಾಮಕ ದಳ :ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಆಗಮಿಸಿ ಮನೆಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿಧದಾರೆ. ಆದೆರೆ, ತೀವ್ರವಾಗಿ ಗಾಯಗೊಂಡಿದ್ದ ಇವರು ಚಿಕಿತ್ಸೆಗೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
