ವಾಷಿಂಗ್ಟನ್:
ನ್ಯಾಟೋ ಮಹಾಕಾರ್ಯದರ್ಶಿ ಮಾರ್ಕ್ ರುಟ್ಟೆ , ಭಾರತ ಚೀನಾ ಮತ್ತು ಬ್ರೆಜಿಲ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸಿದರೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ತಿಳಿಸಿದ್ದಾರೆ. ಬುಧವಾರ ಅಮೆರಿಕದ ಸೆನೆಟರ್‌ಗಳೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ಈ ದೇಶಗಳ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಶಾಂತಿ ಮಾತುಕತೆಗೆ ಒತ್ತಾಯಿಸಬೇಕೆಂದು ಕರೆ ನೀಡಿದರು.
“ನೀವು ಚೀನಾದ ಅಧ್ಯಕ್ಷ, ಭಾರತದ ಪ್ರಧಾನಿ ಅಥವಾ ಬ್ರೆಜಿಲ್‌ನ ಅಧ್ಯಕ್ಷರಾಗಿದ್ದರೆ, ರಷ್ಯಾದೊಂದಿಗೆ ವ್ಯಾಪಾರ ಮಾಡುವುದು, ಅವರ ತೈಲ ಮತ್ತು ಅನಿಲ ಖರೀದಿಯನ್ನು ಮುಂದುವರಿಸಿದರೆ, ಪುಟಿನ್ ಶಾಂತಿ ಮಾತುಕತೆಗೆ ಗಂಭೀರವಾಗಿ ಸ್ಪಂದಿಸದಿದ್ದರೆ 100% ದ್ವಿತೀಯ ದಂಡನೆಗಳನ್ನು ವಿಧಿಸುವೆ” ಎಂದು ರುಟ್ಟೆ ಹೇಳಿದ್ದಾರೆ. “ಬೀಜಿಂಗ್, ದೆಹಲಿ ಅಥವಾ ಬ್ರೆಸಿಲಿಯಾದಲ್ಲಿದ್ದರೆ, ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ, ಇದು ನಿಮಗೆ ತೀವ್ರವಾಗಿ ತಟ್ಟಬಹುದು” ಎಂದವರು ಎಚ್ಚರಿಸಿದ್ದಾರೆ.
ರಷ್ಯಾದೊಂದಿಗಿನ ವ್ಯಾಪಾರದಿಂದ ಈ ದೇಶಗಳಿಗೆ ಆರ್ಥಿಕ ಹೊಡೆತವಾಗಬಹುದು ಎಂದು ಪುಟಿನ್‌ಗೆ ಶಾಂತಿ ಮಾತುಕತೆಗೆ ಒತ್ತಾಯಿಸಲು ಫೋನ್ ಕರೆ ಮಾಡಿ ಎಂದು ರುಟ್ಟೆ ಸಲಹೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಹೊಸ ಸಹಾಯ ಸಹಾಯ ಘೋಷಿಸಿ, ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ 100% ಸುಂಕವನ್ನು ವಿಧಿಸುವ ಬೆದರಿಕೆ ಹಾಕಿದ ಒಂದು ದಿನದ ನಂತರ ಈ ಎಚ್ಚರಿಕೆ ಬಂದಿದೆ. 50 ದಿನಗಳ ಒಳಗೆ ಶಾಂತಿ ಒಪ್ಪಂದವಾಗದಿದ್ದರೆ ರಷ್ಯಾದ ರಫ್ತಿಗೆ ಮತ್ತು ಅದರ ತೈಲ ಖರೀದಿಸುವ ದೇಶಗಳಿಗೆ ದ್ವಿತೀಯ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ಅಮೆರಿಕದ 100 ಸೆನೆಟರ್‌ಗಳಲ್ಲಿ 85 ಜನ ರಷ್ಯಾಕ್ಕೆ ಸಹಾಯ ಮಾಡುವ ದೇಶಗಳಿಗೆ 500%ವರೆಗಿನ ಸುಂಕ ವಿಧಿಸುವ ಶಾಸನಕ್ಕೆ ಬೆಂಬಲ ಸೂಚಿಸಿದ್ದಾರೆ. ಭಾರತ, ಚೀನಾ, ಮತ್ತು ಟರ್ಕಿಯಂತಹ ರಷ್ಯಾದ ಕಚ್ಚಾ ತೈಲದ ದೊಡ್ಡ ಖರೀದಿದಾರ ದೇಶಗಳಿಗೆ ಈ ದಂಡನೆ ತೀವ್ರ ಪರಿಣಾಮ ಬೀರಬಹುದು. ವಿಶೇಷವಾಗಿ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಅಡಚಣೆ ಮತ್ತು ವೆಚ್ಚದ ಏರಿಕೆಯ ಆತಂಕವಿದೆ. ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಿಯಾಬ್ಕೋವ್, “ಟ್ರಂಪ್ ಜತೆ ಮಾತುಕತೆಗೆ ಸಿದ್ಧರಿದ್ದೇವೆ, ಆದರೆ ಒತ್ತಾಯಗಳನ್ನು ಒಪ್ಪಲ್ಲ” ಎಂದಿದ್ದಾರೆ.
