ಚಿಕ್ಕಮಗಳೂರು :
ನಗರದ ಜನರಿಗೆ ಎಚ್ಚರಿಕೆ ಯಾಕಂದ್ರೆ ಕುಡಿಯುವ ನೀರಿನಲ್ಲಿ ವ್ಯತ್ಯಯ ಆಗಲಿದೆ. ಮಳೆ ಸುರಿಯುತ್ತಿದ್ರೂ ಚಿಕ್ಕಮಗಳೂರಿನಲ್ಲಿ ಇಂದು ಮತ್ತು ನಾಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.ಸದ್ಯ ಮಳೆಯ ಅಬ್ಬರ ಕಾಫಿನಾಡಲ್ಲಿ ಜೋರಾಗಿದ್ದು ಮಳೆಯ ಅವಾಂತರಕ್ಕೆ ಜನ ಕಂಗಲಾಗಿದ್ದಾರೆ. ಅಲ್ಲಲ್ಲಿ ವಿದ್ಯುತ್ ಕಂಬದ ಸಮಸ್ಯೆ ನೆಟ್ವರ್ಕ್ ಸಮಸ್ಯೆ, ಹೀಗೆ ಹಲವಾರು ಸಮಸ್ಯೆಗಳ ನಡುವೆ ಚಿಕ್ಕಮಗಳೂರು ನಗರದ ಜನರಿಗೆ ಕುಡಿಯುವ ನೀರಿನಲ್ಲಿ ವ್ಯತ್ಯಯ ಆಗಲಿದೆ.
ಹೌದು ನಗರಕ್ಕೆ ನೀರು ಪೂರೈಸುವ ಮುಗುಳವಳ್ಳಿ ಮಧ್ಯಂತರ ಜಲಾಗಾರದ ಸ್ಕ್ವೀರಲ್ ಗೇಜ್ ಇಂಡಕ್ಷನ್ ಮೋಟಾರ್ ಪಂಪು ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಜುಲೈ 17 ಅಂದ್ರೆ ಗುರುವಾರ ಹಾಗೂ 18 ರ ಶುಕ್ರವಾರದಂದು ನಗರಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.
