ಬೋಸ್ಟನ್:
ಆಸ್ಟ್ರೋನಮರ್ ಸಿಇಒ ಆಂಡಿ ಬ್ರಯಾನ್ ಅವರ ಸಂಸ್ಥೆಯ ಎಚ್‍ಆರ್ ಕ್ರಿಸ್ಟಿನ್ ಕ್ಯಾಬೋಟ್ ಅವರೊಂದಿಗಿನ ಸಂಬಂಧದ ಬಗ್ಗೆ ಇದೀಗ ಇಂಟರ್ನೆಟ್‌ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಈ ಜೋಡಿಯ ಲವ್ವಿ-ಡವ್ವಿ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಬೋಸ್ಟನ್‌ನ ಜಿಲೆಟ್ ಕ್ರೀಡಾಂಗಣದಲ್ಲಿ ನಡೆದ ಕೋಲ್ಡ್‌ಪ್ಲೇನ ಸಂಗೀತ ಕಚೇರಿಯಲ್ಲಿ, ಕ್ಯಾಮರಾ ಬ್ರಯಾನ್ ಮೇಲೆ ಕೇಂದ್ರೀಕರಿಸಿತು. ಅವರ ತೋಳುಗಳು ಕ್ಯಾಬೋಟ್‌ನ ಎದೆಯ ಸುತ್ತಲೂ ಸುತ್ತಿಕೊಂಡು, ಅಪ್ಪಿ ಹಿಡಿದುಕೊಂಡಿದ್ದರು. ಈ ವೇಳೆ ಕ್ಯಾಮರಾ ತಮ್ಮ ದೃಶ್ಯಾವಳಿಯನ್ನು ಸೆರೆಹಿಡಿದಿದೆ ಎಂದು ತಿಳಿದಾಕ್ಷಣ ಬ್ರಯಾನ್ ಕೂಡಲೇ ಹಿಂದೆ ಸರಿದಿದ್ದಾರೆ. ಕ್ಯಾಬೋಟ್ ನಾಚಿಕೆಪಟ್ಟುಕೊಂಡಂತೆ ಕಂಡುಬಂದಿದ್ದು, ತನ್ನ ಮುಖವನ್ನು ಮುಚ್ಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋ ಕಾಡ್ಗಿಚ್ಚಿನಂತೆ ಹರಡಿದ್ದು, ಭಾರಿ ವೈರಲ್ ಆಗಿದೆ. ಅನೇಕರು ಈ ಜೋಡಿಯನ್ನು ಟೀಕಿಸಿದರು. ಮ್ಯಾಸಚೂಸೆಟ್ಸ್‌ನ ಗೌರವಾನ್ವಿತ ಶಿಕ್ಷಕಿ ಮತ್ತು ಇಬ್ಬರು ಮಕ್ಕಳ ತಾಯಿಯಾದ ಬ್ರಯಾನ್ ಅವರ ಪತ್ನಿ ಮೇಗನ್ ಕೆರ್ರಿಗನ್ ಬ್ರಯಾನ್‌ಗೆ ಬೆಂಬಲ ವ್ಯಕ್ತಪಡಿಸಿದರು. ವಿಡಿಯೋ ಬಹಿರಂಗಗೊಂಡಿದ್ದಕ್ಕೆ ಕ್ಷಮಿಸಿ ಎಂದು ಬ್ರಯಾನ್ ಪತ್ನಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಬ್ರಿಯಾನ್ ಮತ್ತು ಕ್ಯಾಬೋಟ್ ಅವರ ಅಫೇರ್ ಕುರಿತಾದ ಇಂಟರ್ನೆಟ್ ಸಂಭಾಷಣೆಯಲ್ಲಿ ಬಿಲಿಯನೇರ್ ಎಲಾನ್ ಮಸ್ಕ್ ಕೂಡ ಸೇರಿಕೊಂಡರು, ಹಲವಾರು ನಕಲಿ ಹೇಳಿಕೆಗಳು ಮತ್ತು ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಹರಡಲು ಪ್ರಾರಂಭಿಸಿದವು. ಅದರಲ್ಲಿ ಬ್ರಯಾನ್ ನಕಲಿ ಕ್ಷಮೆಯಾಚನೆಯೂ ಒಂದು. ಗೌರವಾನ್ವಿತ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಈ ರೀತಿ ಕಾಣಿಸಿಕೊಂಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಆಸ್ಟ್ರೋನಮರ್ ಸಿಇಒ ಆಂಡಿ ಬ್ರಯಾನ್ ಹಾಗೂ ಎಚ್‌ಆರ್ ನಡುವಿನ ದೃಶ್ಯಾವಳಿ ವೈರಲ್ ಆದ ನಂತರ ಅವರ ಪತ್ನಿ ತನ್ನ ಹೆಸರಿನ ಜೊತೆ ಇದ್ದ ಪತಿಯ ಸರ್ ನೇಮ್ ಅಥವಾ ಸರ್‌ನೇಮ್ ಅನ್ನು ಫೇಸ್‍ಬುಕ್‌ನಿಂದ ಡಿಲೀಟ್ ಮಾಡಿದ್ದಾರೆ. ಆಂಡಿ ಬ್ರಯಾನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ತಾಯಿ ಮೇಗನ್ ಅವರ ಫೇಸ್‌ಬುಕ್ ಪ್ರೊಫೈಲ್‌ನಿಂದ ತನ್ನ ಗಂಡನ ಉಪನಾಮವನ್ನು ಕೈಬಿಟ್ಟಿದ್ದಾರೆ ಎಂದು ಎಕ್ಸ್‌ನಲ್ಲಿ ಬಳಕೆದಾರರು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಹ ಅಳಿಸಿದ್ದಾರೆ. ಇಂತಹ ಗಂಡನಿಂದ ವಿಚ್ಛೇದನ ಪಡೆಯಿರಿ ಎಂದು ಬ್ರಯಾನ್ ಪತ್ನಿಗೆ ಕೆಲವು ಬಳಕೆದಾರರು ಸಲಹೆ ನೀಡಿದ್ದಾರೆ.
ಮೇಗನ್ ಕೆರ್ರಿಗನ್ ಮ್ಯಾಸಚೂಸೆಟ್ಸ್ ಮೂಲದ ಒಬ್ಬ ಶಿಕ್ಷಕಿಯಾಗಿದ್ದು, ಪ್ರಸ್ತುತ ವೋರ್ಸೆಸ್ಟರ್‌ನ ಬ್ಯಾನ್‌ಕ್ರಾಫ್ಟ್ ಶಾಲೆಯಲ್ಲಿ ಲೋವರ್ ಸ್ಕೂಲ್ ಮತ್ತು ಹೋಪ್ ಗ್ರಹಾಂ ಕಾರ್ಯಕ್ರಮದ ಪ್ರವೇಶದ ಅಸೋಸಿಯೇಟ್ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಪತಿಯ ವಿವಾದದ ನಂತರ, ಅನೇಕ ನೆಟ್ಟಿಗರು ಪೋಸ್ಟ್ ಮಾಡುವ ಮೂಲಕ ಮೇಗನ್‍ಗೆ ಧೈರ್ಯ ತುಂಬಿದ್ದಾರೆ. ಅಂದಹಾಗೆ, ಜುಲೈ 2023 ರಲ್ಲಿ ಆಂಡಿ ಬ್ರಯಾನ್ ಆಸ್ಟ್ರೋನೊಮರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ತಂತ್ರಜ್ಞಾನ ಸಂಸ್ಥೆಯು ಆಸ್ಟ್ರೋಗೆ ಹೆಸರುವಾಸಿಯಾಗಿದೆ.
