ಕೊರಟಗೆರೆ :-
ವಿದ್ಯುತ್ ತಂತಿ ಹರಿಸಿ ಕಾಡು ಪ್ರಾಣಿಗಳ ಬೇಟೆಗೆ ಹೋದ ಮೂರು ಜನ ಯುವಕರಲ್ಲಿ ಒಬ್ಬ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಸಾವಿಗೀಡಾಗಿ ಇನ್ನಿಬ್ಬರು ಅದೃಷ್ಟವಶಾತ್ ವಿದ್ಯುತ್ ಶಾಕ್ ನಿಂದ ಪಾರಾದ ಘಟನೆ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಬಿಡಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರೇಚಿಕ್ಕನಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಜರುಗಿದ್ದು, ಕೋಳಾಲ ಹೋಬಳಿ ವಜ್ಜನ ಕುರಿಕೆ ಗ್ರಾಮದ ನಾಗಭೂಷಣ್ ಸಾವಿಗೀಡಾದ ದುರ್ದೈವಿಯಾಗಿದ್ದಾನೆ, ಉಳಿದಂತೆ ಇದೇ ಗ್ರಾಮದ ಸಂಜೀವಯ್ಯನ ಮಗ ಮಾರುತಿ ಹಾಗೂ ಮಂಜಣ್ಣನ ಮಗ ಮಾರುತಿ ಅದೃಷ್ಟವಷತ್ ಬದುಕುಳಿದಿದ್ದಾರೆ ಎನ್ನಲಾಗಿದೆ.
ಕಾಡು ಪ್ರಾಣಿಗಳ ಬೇಟೆಗಾಗಿ ಅನಾದಿಕೃತವಾಗಿ ಗಾಡಿ ತಂತಿಯನ್ನು ಹಲವು ಕಡೆ ಪ್ರಾಣಿಗಳ ಕಾಲಿಗೆ ಹಾಗೂ ಕುತ್ತಿಗೆ ಭಾಗಕ್ಕೆ ಸಿಲುಕುವಂತೆ ಕುಣಿಕೆ ಹಣೆದು ಆ ಗಾಡಿ ತಂತಿಗೆ 11 ಕೆ ವಿ ಲೈನ್ ನಿಂದ ವಿದ್ಯುತ್ ಹರಿಸಲು ಪ್ರಯತ್ನಿಸಿ ವಿದ್ಯುತ್ ಸ್ಪರ್ಶದಿಂದ ನಾಗಭೂಷಣ್ ಸ್ಥಳದಲ್ಲಿಯೇ ಸಾವಿಗೀಡಾದರೆ , ಉಳಿದಂತೆ ಒಂದೇ ಕುಟುಂಬದ ಅಣ್ಣತಮ್ಮಂದಿರದ ಮಾರುತಿ ಎಂಬ ಹೆಸರಿನ ಇಬ್ಬರು ವಿದ್ಯುತ್ ಸ್ಪರ್ಶದಿಂದ ಸಾವಿಗೀಟ್ ಆಗಿರುವುದನ್ನು ಅರಿತು ನಾಗಭೂಷಣನನ್ನು ಮುಟ್ಟದೆ ವಿದ್ಯುತ್ ತಂತಿಯನ್ನ ಕೆಳಗೆ ಇಳಿಸಿ ನಂತರ ಅಲ್ಲಿಂದ ಕಾಲ್ ಕಿತ್ತಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದು ಹೊಳವನಹಳ್ಳಿ ಬೆಸ್ಕಾಂನ ಯೋಗೇಶ್ ಸಹ ಹಾಜರಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
