ಕೊರಟಗೆರೆ :-
ಬಸ್ ಹಾಗೂ ಕಾರಿನ ನಡುವಿನ ಬೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವಿಗಿಡಾಗಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕೊರಟಿಗೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.ಕೊರಟಗೆರೆ ತಾಲೂಕಿನ ಗಡಿ ಭಾಗ ಅರಸಾಪುರ ಗೇಟ್ ಬಳಿ ಈ ದುರ್ಘಟನೆ ತಿರುಗಿದ್ದು , ಗೌರಿಬಿದನೂರು ಮೂಲದ 4 ಜನ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೋರ್ವ ದಾರಿ ಮಧ್ಯೆ ಮೃತಪಟ್ಟು ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಗೌರಿಬಿದನೂರು ಮೂಲದವರಾದ ಅಕ್ತರ್ ಜಾನ್ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಶೇಕ್ ಮಹಮ್ಮದ್ ಮಾರ್ಗ ಮದ್ಯ ಕೊನೆ ಉಸಿರೆಳೆದಿದ್ದಾರೆ ಎನ್ನಲಾಗಿದೆ ಉಳಿದಂತೆ ಪರಹಾನ್ ಶಮೀರ್, ಮುಫಿತ್ ಬೆಂಗಳೂರಿನ ಯಲಹಂಕ ಕೆಕೆ ಹಾಸ್ಪಿಟಲ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ನ್ಯಾಷನಲ್ ಹೈವೇ 69 ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ರಸ್ತೆ ಕಾಮಗಾರಿ ಮಾರ್ಗಸೂಚಿ ಗಮನಿಸದೇ ಅತಿ ವೇಗವಾಗಿ ಬರುತ್ತಿದ್ದ ವಿಜಯನಂದಿ ಬಸ್ ಹಾಗು ಮಹಿಂದ್ರ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರು ಅಪಘಾತಕ್ಕೆ ನಜ್ಜುಗುಜ್ಜಾಗಿ ಕಾರಿನಲ್ಲಿದ್ದ ನಾಲ್ವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊರ್ವ ಮಾರ್ಗ ಮಧ್ಯೆ ಕೊನೆ ಉಸಿರುಳಿದಿದ್ದು , ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಕೀರ್ತಿಶ್ ಸ್ಥಳಕ್ಕೆ ಭಾವಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಏನಾಗಿದೆ.
