ಬೆಂಗಳೂರು:
ರಾಜ್ಯ ಮಾತ್ರವಲ್ಲದೇ ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾದ ಝಲಕ್ವೊಂದು ಹೊರಬಿದ್ದಿದೆ. 3 ವರ್ಷಗಳ ಅವಿರತ ಶ್ರಮ ಮತ್ತು 250 ದಿನಗಳ ಚಿತ್ರೀಕರಣದ ನಂತರ, ರಿಷಬ್ ಶೆಟ್ಟಿ ಮತ್ತು ಅವರ ತಂಡವು ಚಿತ್ರೀಕರಣವನ್ನು ಮುಗಿಸಿದೆ. ಕೆಜಿಎಫ್, ಸಲಾರ್, ಕಾಂತಾರ ಚಾಪ್ಟರ್ 2 ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಾಪ್ಟರ್-1 ಚಿತ್ರದ ಮೇಕಿಂಗ್ ವಿಡಿಯೊವೊಂದನ್ನು ರಿಲೀಸ್ ಮಾಡಿದೆ.
ವಿಡಿಯೊದಲ್ಲಿ ಚಿತ್ರ ಕಂಪ್ಲೀಟ್ ಶೂಟಿಂಗ್ ಹೇಗಾಯ್ತು? ಚಿತ್ರ ತಂಡ ಯಾವ ಸವಾಲುಗಳನ್ನು ಎದುರಿಸಿತು ಎಂಬುದನ್ನು ವಿವರಿಸಲಾಗಿದೆ. ವಸಾಹತುಶಾಹಿ ಪೂರ್ವ ಕರಾವಳಿ ಕರ್ನಾಟಕವನ್ನು ಆಧರಿಸಿ ಈ ಚಿತ್ರವು ಭೂತ ಕೋಲ ಆಚರಣೆಯ ದಂತಕಥೆ ಮತ್ತು ದೈವಿಕ ಭೂ ಪಾಲನೆಯ ಸುತ್ತಲಿನ ಪೌರಾಣಿಕ ಕಥೆಯನ್ನು ವಿವರಿಸುತ್ತದೆ.
ವಿಡಿಯೊದಲ್ಲಿ ರಿಷಬ್ ಶೆಟ್ಟಿ ಸಿನಿಮಾ, ಶೂಟಿಂಗ್ ಸೆಟ್, ಸಹ ಕಲಾವಿದರು ಹೀಗೆ ಹತ್ತು ಹಲವು ಸಂಗತಿಗಳನ್ನು ತಮ್ಮದೇ ಶೈಲಿಯಲ್ಲಿ ವಿವರಿಸುತ್ತಾ ಹೋಗುತ್ತಾರೆ. ನಮ್ಮ ಮಣ್ಣಿನ, ನಮ್ಮ ಜನರ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಅನ್ನೋದು ನನ್ನ ಕನಸು. 3 ವರ್ಷಗಳ ಪರಿಶ್ರಮ, 250 ದಿನಗಳ ಶೂಟಿಂಗ್, ಎಷ್ಟೇ ಕಷ್ಟಬಂದರೂ ಕೂಡ ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ತಂಡ, ನನ್ನ ನಿರ್ಮಾಪಕರು ಕೈ ಬಿಡಲಿಲ್ಲ.
ಪ್ರತಿದಿನ ಸೆಟ್ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ಇದು ಸಿನಿಮಾವಲ್ಲ, ಶಕ್ತಿ ಎನ್ನೋದು ನನಗೆ ಅರ್ಥ ಆಯ್ತು. ಕಾಂತಾರ ಪ್ರಪಂಚಕ್ಕೆ ನಿಮಗೆಲ್ಲರಿಗೂ ಸ್ವಾಗತ. ಕಾಂತಾರ ಪ್ರಯಾಣವನ್ನು ಪ್ರಾರಂಭಿಸಿದಾಗ ತನ್ನೊಂದಿಗೆ ನಿಂತು ಈ ಜಗತ್ತನ್ನು ನಿರ್ಮಿಸಲು ಸಹಾಯ ಮಾಡಿದ ಜನರಿಗೆ ಅವರು ಧನ್ಯವಾದಗಳು ಎಂದಿದ್ದಾರೆ. ಅರ್ಪಿಸಿದರು. ವಿಡಿಯೊದ ಕೊನೆಯಲ್ಲಿ, ಅವರು ತಮ್ಮ ಚಿತ್ರತಂಡಕ್ಕೆ ಧನ್ಯವಾದಗಳನ್ನು ಹೇಳುವುದನ್ನು ಕಾಣಬಹುದಾಗಿದೆ.
2 ನಿಮಿಷಗಳ ವೀಡಿಯೊವು ಬೆಟ್ಟದ ತುದಿಯಲ್ಲಿ ದೇವಾಲಯವನ್ನು ನಿರ್ಮಿಸುವುದನ್ನು ಮತ್ತು ಸಾಹಸ ದೃಶ್ಯಗಳನ್ನು ನೋಡಬಹುದಾಗಿದೆ. ಚಿತ್ರೀಕರಣದ ನಡುವೆ, ಶೆಟ್ಟಿ ತಮ್ಮ ಪಾತ್ರಕ್ಕಾಗಿ ವ್ಯಾಯಾಮ ಮಾಡುತ್ತಿರುವುದು ಮತ್ತು ತಯಾರಿ ನಡೆಸುತ್ತಿರುವುದು ಕಂಡುಬಂದಿದೆ. ಅವರ ಪತ್ನಿ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಇನ್ನು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಿಷಬ್, ಕಾಂತಾರ ಅಧ್ಯಾಯ 1 ರ ಚಿತ್ರೀಕರಣ ಇಂದು ಕೊನೆಗೊಳ್ಳುತ್ತದೆ. ಪ್ರಯಾಣ ಇಲ್ಲಿಗೆ ಮುಗಿಯುವುದಿಲ್ಲ. ಇದು ಕೇವಲ ಪ್ರಾರಂಭವಾಗಿದೆ. ಅಕ್ಟೋಬರ್ 2 ರಂದು ಭಾರತದ ಡಿವೈನ್ ಎಪಿಕ್ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
