ಕಲಾಕುಂಚ ಸಂಸ್ಥೆ ವತಿಯಿಂದ ದಾವಣಗೆರೆಯಲ್ಲಿ ನಾಗರಂಗ ನಿರಂಜನ್ ಗೆ ಕನ್ನಡ ಕೌಸ್ತುಭ’ ಮತ್ತು ‘ಸರಸ್ವತಿ ಪ್ರಶಸ್ತಿ ಪ್ರದಾನ

ಕೊರಟಗೆರೆ :-

    ಪ್ರತಿಭಾವಂತ ವಿದ್ಯಾರ್ಥಿ ನಾಗರಂಗ ನಿರಂಜನ್ ರವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ದಾವಣಗೆರೆಯ ಕಲಾಕುಂಚ ಸಂಸ್ಥೆಯು ರಾಜ್ಯಮಟ್ಟದ ‘ಕನ್ನಡ ಕೌಸ್ತುಭ’ ಮತ್ತು ‘ಸರಸ್ವತಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದರು.

     ಕೊರಟಗೆರೆ ಪಟ್ಟಣದ ಎಚ್ ಎಂ ವೇಣುಗೋಪಾಲ್ ಮತ್ತು ಶ್ರೀಮತಿ ನೇತ್ರಾ ದಂಪತಿಗಳ ಸುಪುತ್ರರಾಗಿರುವ ನಾಗರಂಗ ನಿರಂಜನ್ ಅವರು ಕೊರಟಗೆರೆ ಪಟ್ಟಣದ ಚಾಣುಕ್ಯ ಪಬ್ಲಿಕ್ ಸ್ಕೂಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇವರು ಕನ್ನಡದಲ್ಲಿ 125ಕ್ಕೆ 125 ಪೂರ್ಣ ಅಂಕ ಗಳಿಸುವ ಮೂಲಕ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿ ಬಾಜಿ ನರಾಗಿದ್ದಾರೆ ಬಾಜನರಾಗಿದ್ದಾರೆ, 

     ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿ ಹಾಗೂ ಸರಸ್ವತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲೂಕಿನ ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ನಾಗರಂಗ ನಿರಂಜನ್ ವಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

     ಕನ್ನಡದಲ್ಲಿ ಪೂರ್ಣ ಅಂಕ ಪಡೆದಿರುವುದು, ಭಾಷೆಯ ಮೇಲಿನ ಅವರ ಮೆಚ್ಚುಗೆ ಹಾಗೂ ಶ್ರಮದ ಸಫಲತೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಾಗರಂಗ ನಿರಂಜನ್ ಅವರ ಈ ಸಾಧನೆಗೆ ಶಾಲಾ ಮುಖ್ಯಗುರುಗಳು, ಶಿಕ್ಷಕವೃಂದ, ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ಇತರ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿದಾಯಕ ಉದಾಹರಣೆಯಾಗಿದ್ದಾರೆ.

Recent Articles

spot_img

Related Stories

Share via
Copy link