ಗುಬ್ಬಿ:
ಜ್ಞಾನ ದೇಗುಲಕ್ಕೆ ದುರ್ಗಮ ಮಾರ್ಗ,ಹತ್ತಾರು ಹಳ್ಳಿಗಳಿಂದ ಶಿಕ್ಷಣ ಪಡೆಯಲು ತಮ್ಮ ಸ್ವಂತ ಖರ್ಚಿನಿಂದ ವಾಹನಗಳಲ್ಲಿ ಬರುವ ವಿಧ್ಯಾರ್ಥಿ ಗಳು ನಿತ್ಯ ಯಾತನೆ ಅನುಭವಿಸಿ ಸಾಗುವ ಪರಿಸ್ಥಿತಿಯಾಗಿದೆ, ಗುಬ್ಬಿ ತಾಲೂಕು ಕಡಬ ಹೋಬಳಿ ಕಾಡಶೆಟ್ಟಿ ಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪಿ ಎಂ ಶ್ರೀ ಶಾಲೆ ಇಡಿ ನಾಡಿಗೆ ಪ್ರಸಿದ್ದಿ ಪಡೆದ ಶಾಲೆ ಎಂದರೆ ತಪ್ಪಾಗಲಾರದು ಇಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ತರಗತಿಗಳು ಇದ್ದು ಇಲ್ಲಿನ ಕಲಿಕೆಗೆಂದು ಸುತ್ತ ಮುತ್ತಲಿನ ಹಳ್ಳಿಯ ಮಕ್ಕಳು ಈ ರಸ್ತೆಯ ಮೂಲಕವೇ ಬರಬೇಕು ಇಲ್ಲಿ ರಸ್ತೆ ಎಷ್ಟರಮಟ್ಟಿಗೆ ಹಾಳಾಗಿದೆ ಎಂದರೆ ಗುಂಡಿ ಗುದರಗಳು ಬಿದ್ದು ಕಾಡು ದಾರಿಯಾಗಿದೆ ಈ ಬಗ್ಗೆ ಇಲ್ಲಿನ ಜನ ಪ್ರತಿನಿಧಿಗಳು ಯಾರು ತಲೆಕೆಡೆಸಿಕೊಂಡಂತೆ ಕಾಣುತ್ತಿಲ್ಲ.
ಇಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯರು ಕರ್ನಾಟಕ ಗ್ರಾಮ ಪಂಚಾಯ್ತಿ ಸದಸ್ಯರ ಒಕ್ಕೂಟದ ರಾಜ್ಯಅಧ್ಯಕ್ಷರು ಇವರ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಹೀಗಾದರೆ ಗುಬ್ಬಿ ತಾಲೂಕಿನ ಕುಗ್ರಾಮಗಳ ಸಂಪರ್ಕಿಸುವ ರಸ್ತೆಗಳ ಕಥೆಯೇನು, ಈ ಬಗ್ಗೆ ಅಧಿಕಾರಿಗಳು ತಲೆಕೆಡೆಸಿಕೊಂಡಿಲ್ಲ ಇದು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ರಸ್ತೆಯಾಗಿದ್ದು ಕನಿಷ್ಠ ಪಕ್ಷ ಇವರಾದರು ಇಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿಲ್ಲ, ಕಾಡಶೆಟ್ಟಿ ಹಳ್ಳಿ ಗ್ರಾಮಸ್ಥರು ಹಲವಾರು ಬಾರಿ ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದಾರಾದರು ಪ್ರಯೋಜನವಾಗಿಲ್ಲ, ಎಂಬುದೇ ಈ ಊರಿನ ಗ್ರಾಮಸ್ಥರ ಅಳಲು,
