ಶಿರಸಿ:
ಇಲ್ಲಿಯ ನಟರಾಜ ನೃತ್ಯ ಶಾಲೆಯ ಆಯೋಜನೆಯಲ್ಲಿ ನೃತ್ಯಾರಾಧನೆ ಕಲಾ ಪ್ರದರ್ಶನ ಜು. 27ರ ಸಂಜೆ 5ಕ್ಕೆ ನಗರದ ಎಪಿಎಂಸಿ ಪ್ರಾಂಗಣದ ಟಿ ಆರ್ ಸಿ ಬ್ಯಾಂಕ್ ಸಭಾಭವನದಲ್ಲಿ ನಡೆಯಲಿದೆ. ನೃತ್ಯ ಶಾಲೆಯ ಗುರು ವಿ. ಸೀಮಾ ಭಾಗ್ವತರ ನಿರ್ದೇಶನದಲ್ಲಿ ರಿತಿಕಾ ಸಿರಿ ಮತ್ತು ಅಮೃತಾ ಜಾರ್ಜ್ ನಾಟ್ಯ ಪ್ರದರ್ಶನ ನೀಡಲಿದ್ದಾರೆ.
ನಟುವಾಂಗದಲ್ಲಿ ವಿ. ದೀಪಾ ಭಾಗ್ವತ, ಹಾಡುಗಾರಿಕೆಯಲ್ಲಿ ವಿ. ನವೀನ ಅಂದಗಾರು, ಮೃದಂಗದಲ್ಲಿ ವಿ. ಪಂಚಮ ಉಪಾಧ್ಯಾಯ, ಕೊಳಲು ವಾದನದಲ್ಲಿ ವಿ. ದೀಪಕ ಹೆಬ್ಬಾರ ಮತ್ತು ರಿದಂ ಪ್ಯಾಡ್ ನಲ್ಲಿ ವಿ.ಈ ಗೋಪಿಕೃಷ್ಣ ನಂಬೂದಿರಿ ಪಾಲ್ಗೊಳ್ಳುವರು. ಹಿರಿಯ ಲೇಖಕಿ ಡಾ. ವಿಜಯನಳಿನಿ ರಮೇಶ ಉಪಸ್ಥಿತರಿರುವರು ಎಂದು ನೃತ್ಯ ಶಾಲೆಯ ಪ್ರಕಟಣೆ ತಿಳಿಸಿದೆ.
