ರವಿವಾರ ಶಿರಸಿ ನಗರ ಭಾಗದ ಹವ್ಯಕ ಶಿಷ್ಯರಿಂದ ಸ್ವರ್ಣವಲ್ಲೀಯಲ್ಲಿ ಸೀಮಾಭಿಕ್ಷ

ಶಿರಸಿ:

    ಸ್ವರ್ಣವಲ್ಲೀ ಮಠದ ನಗರಭಾಗದ ಹವ್ಯಕ ಶಿಷ್ಯರಿಂದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಚಾತುರ್ಮಾಸದ ನಿಮಿತ್ತ ಸೀಮಾಭಿಕ್ಷದ ಕಾರ್ಯಕ್ರಮ ಜು.೨೭ ಭಾನುವಾರದಂದು ನಡೆಯಲಿದೆ.

    ಉಭಯ ಶ್ರೀಗಳವರ ಪಾದಪೂಜೆ, ಭಿಕ್ಷೆ, ಸುಮಂಗಲಿಯರಿಂದ ಕುಂಕುಮಾರ್ಚನೆ ಹಾಗೂ ಉಪನೀತರಿಂದ ಗಾಯತ್ರಿ ಜಪಾನುಷ್ಠಾನ
ಕಾರ್ಯಕ್ರಮಗಳಿರುತ್ತಿದ್ದು, ಆ ದಿನ ಬೆಳಿಗ್ಗೆ 10 ಗಂಟೆಯ ಒಳಗಾಗಿ ಹವ್ಯಕ ಶಿಷ್ಯರು ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀಗುರು ಸೇವೆಯಲ್ಲಿ ಭಾಗವಹಿಸಲು ಕೋರಲಾಗಿದೆ.ಹಾಗೆಯೇ ಶಿರಸಿ ಯೋಗಮಂದಿರದಲ್ಲಿ ಆಗಷ್ಟ ೮ ಶುಕ್ರವಾರ ಮುಂಜಾನೆ 9:30 ಗಂಟೆಗೆ ಹವ್ಯಕ ಮಾತೆಯರಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಹಾಗೂ ಆ.೯ ಶನಿವಾರ ಮುಂಜಾನೆ 8 ಗಂಟೆಯಿಂದ ಹವ್ಯಕ ಶಿಷ್ಯರಿಗೆ ಯಜ್ಞೋಪವೀತ ಧಾರಣ ಹಾಗೂ ಉಪಾಕರ್ಮ ಮಾಡಿಸಲು ಅವಕಾಶವಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಯೋಗಮಂದಿರವು ಪ್ರಕಟಣೆ ಮೂಲಕ ವಿನಂತಿಸಿದೆ.

Recent Articles

spot_img

Related Stories

Share via
Copy link