ಹೊನ್ನಾವರ:
ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಹಳ್ಳದಾಟುವಾಗ ವ್ಯಕ್ತಿ ಒಬ್ಬ ಕೊಚ್ಚಿ ಹೋದ ಘಟನೆ ಹೊನ್ನಾವರ ಮಂಕಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇಂದು ಜುಲೈ 25 ರಂದು ತಾಲೂಕಿನ ಖಾಸಗೇರಿ, ಅನಂತವಾಡಿಯ ಜನಾರ್ಧನ ರಾಮ ಮರಾಠಿ (45) ಈತ ಗದ್ದೆ ಕೆಲಸಕ್ಕೆ ಎಂದು ಹೋಗಿ ಮಳೆ ಜಾಸ್ತಿ ಆದ್ದರಿಂದ ಮರಳಿ ಮನೆಗೆ ಬರುವಾಗ,ಹಳ್ಳದಾಟುವ ಸಂದರ್ಭದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ಮಂಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
