ನವದೆಹಲಿ :
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) 2025-26ರ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟು ಕಾರ್ಮಿಕ ಬಲದ ಶೇಕಡಾ 2% ಅಥವಾ ಸುಮಾರು 12,000ಕ್ಕೂ ಅಧಿಕ ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.ಈ ಕಡಿತವು ಮುಖ್ಯವಾಗಿ ಮಧ್ಯಮ ಮತ್ತು ಹಿರಿಯ ನಿರ್ವಹಣೆಯ ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.ಕೃತಕ ಬುದ್ಧಿಮತ್ತೆ (AI) ಮತ್ತು ಇತರ ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು,ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು TCS ಈ ಕ್ರಮಕ್ಕೆ ಮುಂದಾಗಿದೆ ಎಂದು ಕೇಳಿ ಬರುತ್ತಿದೆ.
TCS CEO ಕೆ. ಕೃತಿವಾಸನ್ ಅವರು ಕಂಪನಿಯ ಈ ನಿರ್ಧಾರವನ್ನು “ಭವಿಷ್ಯಕ್ಕೆ ಸಿದ್ಧವಾಗಿರುವ ಸಂಸ್ಥೆ”ಯಾಗಿ ಮಾರ್ಪಡಿಸುವ ಭಾಗವಾಗಿ ತೆಗೆದುಕೊಂಡಿರುವ ಕಠಿಣ ಕ್ರಮ ಎಂದೂ ವಿವರಣೆ ನೀಡಿದ್ದಾರೆ.ಕಂಪನಿ ಈ ಪರಿವರ್ತನೆಯನ್ನು ಗ್ರಾಹಕ ಸೇವೆಗೆ ತೊಂದರೆಯಾಗದಂತೆ ಯೋಜಿಸುತ್ತಿದೆ ಎಂದು ಭರವಸೆ ನೀಡಿದೆ.
ಕಡಿತಗೊಳ್ಳುವ ಉದ್ಯೋಗಿಗಳಿಗೆ ವೇತನದೊಂದಿಗೆ ಸೂಚನೆಯ ಅವಧಿ,ನಿವೃತ್ತಿ ಪರಿಹಾರ,ವಿಸ್ತೃತ ಆರೋಗ್ಯ ವಿಮೆ,ಮತ್ತು ಔಟ್‌ಪ್ಲೇಸ್‌ಮೆಂಟ್ ಸೇವೆಗಳನ್ನು ಒದಗಿಸುವುದಾಗಿTCS ಭರವಸೆ ನೀಡಿರುವುದಾಗಿ ಹೇಳಲಾಗಿದೆ.ಒಟ್ಟಾರೆ ಮನುಷ್ಯನೇ ನಿರ್ಮಿಸಿದ ಕ್ರತಕ ಬುದ್ದಿಮತ್ತೆ ಎಂಬ ಪ್ರಚಂಡ ಕೊನೆಗೆ ರಾಜ್ಯಭಾರವನ್ನೇ ಮಾಡಿ ಬಿಟ್ಟಾನು ಎಂಬ ಭಯ ಮೂರ್ಖ ರಾಜಕಾರಣಿಗಳಿಗೆ ಕಾಡಬಹುದೇನೊ?.
