ಮುರುಡೇಶ್ವರ:
ಠಾಣೆಗೆ ಬಂದ ಫಿರ್ಯಾದಿದಾರನನ್ನು ಪಿಎಸ್ಐ ಬಳಿ ಭೇಟಿ ಮಾಡಿಸುವ ವೇಳೆ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಬಗ್ಗೆ ಕಿರಣ ಮಾದೇವ ನಾಯ್ಕ್ ಎಂಬಾತನ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಜುಲೈ 26ರಂದು,ಶ್ರೀನಿವಾಸ ಹೋಟೆಲ್ ನಡೆಸುತ್ತಿರುವ ಅನಂತ ಶನಿಯಾರ ನಾಯ್ಕ್ ಎಂಬುವವರು ತಮ್ಮ ಹೋಟೆಲ್ ನ ಕ್ಯಾಶ್ ಕೌಂಟರ್ ನಲ್ಲಿ ಆರೋಪಿ ಕಿರಣ ಮಾದೇವ ನಾಯ್ಕ್ ಸಾ. ಮಾವಳ್ಳಿ ಎಂಬಾತ ಕೈ ಹಾಕಿ ಹಣ ಕಸಿದು ಗಲಾಟೆ ಮಾಡಿದ್ದ ಎಂದು ದೂರು ನೀಡಲು ಠಾಣೆಗೆ ಬಂದಾಗ, ಆರೋಪಿ ಆತನ ಹಿಂದೆಯೇ ಬಂದು ಠಾಣೆಯ ಎಎಸ್ಐ ಉಲ್ಲಾಸ ಮಂಜುನಾಥ್ ಕೆಲ್ಸಿ ರವರಿಗೆ ಬೆದರಿಕೆ ಹಾಕಿ, ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿ ನೀಡಿದ ದೂರಿನ ಹಿನ್ನಲೆಯಲ್ಲಿ ಮುರುಡೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಮುಂದುವರಿದಿದೆ.
