ನವದೆಹಲಿ:
ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತೀಯ ಕ್ರಿಕೆಟ್ ಹಿರಿಯ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೆ ಮಾತ್ರ ಲಭ್ಯರಿದ್ದಾರೆ. ಹೀಗಾಗಿ ಇವರು ಯಾವಾಗ ಭಾರತ ಪರ ಮುಂದಿನ ಪಂದ್ಯ ಆಡಲಿದ್ದಾರೆ ಎಂದು ಉಭಯ ಆಟಗಾರರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಕೊಹ್ಲಿ ಮತ್ತು ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ.
ಕಳೆದ ವರ್ಷ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಈ ಜೋಡಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿತ್ತು. ಗೀಗಾಗಿ ಮುಂದಿನ ತಿಂಗಳು ನಡೆಯುವ ಏಷ್ಯಾಕಪ್‌ನಲ್ಲಿ ಇವರು ಆಡುತ್ತಿಲ್ಲ. 50 ಓವರ್‌ಗಳ ಸ್ವರೂಪದ ಮೇಲೆ ಮಾತ್ರ ಗಮನಹರಿಸಿರುವುದರಿಂದ, ಪ್ರಸ್ತುತ ಕ್ಯಾಲೆಂಡರ್‌ನಲ್ಲಿ ಸೀಮಿತ ಸಂಖ್ಯೆಯ ಏಕದಿನ ಪಂದ್ಯಗಳನ್ನು ನೀಡಿದರೆ ಕೊಹ್ಲಿ ಮತ್ತು ರೋಹಿತ್ ಅವರ ಅಂತಾರಾಷ್ಟ್ರೀಯ ಪ್ರದರ್ಶನಗಳು ಕಡಿಮೆಯಾಗಿರುತ್ತವೆ.
ಆಸ್ಟ್ರೇಲಿಯಾ ಸರಣಿ ಕೊಹ್ಲಿ ಮತ್ತು ರೋಹಿತ್ ಪುನರಾಗಮನಕ್ಕೆ ಒಂದು ವೇದಿಕೆಯಾಗಿದೆ. ಆಸೀಸ್ ಏಕದಿನ ಸರಣಿಯು ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ vs ಭಾರತ ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ; ಅಕ್ಟೋಬರ್ 19, ಪರ್ತ್
ಎರಡನೇ ಏಕದಿನ; ಅಕ್ಟೋಬರ್ 23, ಅಡಿಲೇಡ್
ಮೂರನೇ ಏಕದಿನ; ಅಕ್ಟೋಬರ್ 25, ಸಿಡ್ನಿ








