ಶಿರಸಿ:
ಭಾರತೀಯ ಮೂಳೆ ಚಿಕಿತ್ಸಕರ ಸಂಘದ “*ಹಳೆಯದು ಚಿನ್ನ – 360° ಹಿರಿಯರ ಆರೈಕೆ – ಚಲನಶೀಲತೆ, ಘನತೆ ಮತ್ತು ದೀರ್ಘಾಯುಷ್ಯದ ಖಚಿತಪಡಿಸುವಿಕೆ*” ಪ್ರಸಕ್ತ ವರ್ಷದ ಅಧ್ಯಕ್ಷೀಯ ಧ್ಯೇಯದೊಂದಿಗೆ ಎಲುಬು ಮತ್ತು ಕೀಲು ಸಪ್ತಾಹದ ಅಂಗವಾಗಿ ಇತ್ತೀಚಿಗೆ ಶಿರಸಿಯ ಎಲುಬು ಮತ್ತು ಕೀಲು ತಜ್ಞ ವೈದ್ಯರು ಸಮೀಪದ ಮುಂಡಗೆಸರದಲ್ಲಿರುವ ಸುಯೋಗಾಶ್ರಯದಲ್ಲಿ ವಿಶೇಷ ಶಿಬಿರವನ್ನು ನಡೆಸಿಕೊಟ್ಟರು.
ವೃದ್ಧರೇ ಹೆಚ್ಚಿರುವ ಸುಯೋಗಾಶ್ರಯ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ ಐ.ಒ.ಎ.ದ ಉ.ಕ. ಜಿಲ್ಲಾ ಘಟಕಾಧ್ಯಕ್ಷ ಡಾ. ಮಧುಕೇಶ್ವರ ಜಿ.ವಿ., ಹಿರಿಯ ನಾಗರಿಕರು ಅನುಸರಿಸಬೇಕಾದ ಮಾಹಿತಿ ನೀಡಿ, ವೃದ್ಧರು ತೆಗೆದುಕೊಳ್ಳಬೇಕಾದ ಜಾಗೃತೆಯನ್ನು ತಿಳಿಸಿದರು. ಹಿರಿಯ ವೈದ್ಯ ಡಾ. ಡಿ.ಎಮ್. ಹೆಗಡೆಯವರೂ ಸಲಹೆ ನೀಡಿದರು. ಸುಯೋಗಾಶ್ರಯದ ಮುಖ್ಯಸ್ಥೆ ಶ್ರೀಮತಿ ಲತಿಕಾ ಭಟ್ಟ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.
ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದ ರವಿ ಹೆಗಡೆ ಗಡಿಹಳ್ಳಿ ಪರಿಚಯಿಸಿದರು. ಡಾ. ಕೈಲಾಶ ಪೈ, ಡಾ. ಗೌತಮ್ ಶೇಟ್ ಮತ್ತು ಡಾ. ಬಾಲಚಂದ್ರ ಅವರು ವೇದಿಕೆಯಲ್ಲಿದ್ದರು. ಇಂಟಾಸ್ ಕಂಪನಿಯ ಸಂತೋಷ್ ಎಲುಬು ಸಾಂಧ್ರತಾ ತಪಾಸಣೆ ನಡೆಸಿಕೊಟ್ಟರು. ಅನೂಪ್ ಭಟ್ ಸಹಕರಿಸಿದರು.








