ಆ.19 ರಂದು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ

ಶಿರಸಿ; 

   ಧರ್ಮಸ್ಥಳದ ಎಲ್ಲ ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗುತ್ತಿದೆ. ಇದರಲ್ಲಿ ಧರ್ಮ ವಿರೋಧಿಗಳ, ರಾಜಕೀಯದವರ ಪಾತ್ರವೂ ಇದೆ. ಇತ್ತೀಚೆಗೆ ನಡೆಯುತ್ತಿರುವ ಇದರ ಬೆಳವಣಿಗೆಯ ಕುರಿತಂತೆ ನಾವು ಹಲವು ಸಂಘ ಸಂಸ್ಥೆ, ದೇವಸ್ಥಾನ ಕಮಿಟಿ, ಮಠಗಳ ಎಲ್ಲರೂ ಸಹ ಮಂಗಳವಾರ ಇದನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಉಪೇಂದ್ರ ಪೈ ಹೇಳಿದರು.ಅವರಿಂದು ಪತ್ರಿಕಾ ಭವನದಲಗಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 

   ಧರ್ಮಸ್ಥಳ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಅನಾಮಧೇಯ ವ್ಯಕ್ತಿಯ ಹೇಳಿಕೆಯ ಮೇರೆಗೆ ಎಸ್ ಐ ಟಿಯೂ ಸಹ ಮಾನದಂಡ ಚೌಕಟ್ಟನ್ನು ಮೀರಿ ಅನಾಮಧೇಯ ವ್ಯಕ್ತಿಯ ಹೇಳಿಕೆ ಯ ಮೇಲೆ ಕಾರ್ಯ ನಡೆಯುತ್ತಿದೆ. ಇದನ್ನು ನಾವೆಲ್ಲ ಖಂಡಿಸುತ್ತೇವೆ. ಧರ್ಮಸ್ಥಳ ಕೊಡುಗೆಯ ಬಗ್ಗೆ ನಾವು ಯಾರು ಏನನ್ನೂ ಹೇಳಬೇಕಿಲ್ಲ. ಸಮಾಜಕ್ಕೆ ಅಲ್ಲಿಂದ ಸಿಕ್ಕ ಸೌಲಭ್ಯ, ಸೌಕರ್ಯ ಹಾಗೂ ಸೇವೆ ಅನನ್ಯ. ಇದು ಕೇವಲ ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರವಲ್ಲದೇ ಈ ಹಿಂದೆ ಸಾಕಷ್ಟು ಧಾರ್ಮಿಕ ಕ್ಷೇತ್ರದ ಮೇಲೆ ನಡೆದಿದೆ. 19 ರಂದು ನಾವು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ ಎಂದರು.

   ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಹೆಬ್ಬಾರ, ಬಿಜೆಪಿ ಪ್ರಮುಖ ಸದಾನಂದ ಭಟ್, ಜೈನ ಮಠದ ಮಹಾವೀರ, ಜಯತೀರ್ಥ ವಿಎನ್ ಹೆಗಡೆ, ಉಷಾ ಹೆಗಡೆ, ಆನಂದ ಸಾಲೇರ, ಆರ್ ಡಿ ಹೆಗಡೆ, ಸಂಧ್ಯಾ ಕುರ್ಡೇಕರ್, ಪರಮಾನಂದ ಹೆಗಡೆ ಮುಂತಾದವರಿದ್ದರು.

Recent Articles

spot_img

Related Stories

Share via
Copy link