ಬೆಂಗಳೂರು
ಕೇಶ ಹಾಗೂ ತ್ವಚೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’, ಭಾರತ ಹಾಗೂ ಜಾಗತಿಕವಾಗಿ 100ಕ್ಕೂ ಹೆಚ್ಚು ಕ್ಲಿನಿಕ್ಗಳನ್ನು ಹೊಂದುವ ಮೂಲಕ ತನ್ನ ವಿಸ್ತರಣಾ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಸಾಧನೆಯ ಭಾಗವಾಗಿ, ಸಂಸ್ಥೆಯು ತನ್ನ ನೂತನ ಶಾಖೆಯನ್ನು ಬೆಂಗಳೂರಿನ ಸರ್ಜಾಪುರದಲ್ಲಿ ಭಾನುವಾರ ಭವ್ಯವಾಗಿ ಉದ್ಘಾಟಿಸಿದೆ.
ಈ ವಿಸ್ತರಣೆಯು ಕೇವಲ ಸಾಂಖ್ಯಿಕ ಸಾಧನೆಯಲ್ಲ, ಬದಲಾಗಿ ವಿಶ್ವದರ್ಜೆಯ ಕೇಶ ಹಾಗೂ ತ್ವಚೆಯ ಸೌಂದರ್ಯ ಚಿಕಿತ್ಸೆಗಳನ್ನು ಬಯಸುವ ಲಕ್ಷಾಂತರ ಜನರಿಗೆ ಭರವಸೆ ಮತ್ತು ಪರಿವರ್ತನೆಯ ಸಂಕೇತವಾಗಿದೆ ಎಂದು ಸಂಸ್ಥೆ ತಿಳಿಸಿದೆ. ನೂರಾರು ಯಶಸ್ವಿ ಕ್ಲಿನಿಕ್ಗಳು ಗಳಿಸಿರುವ ಅಪಾರ ನಂಬಿಕೆ ಮತ್ತು ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಪರಿಣತಿಯನ್ನು ಸರ್ಜಾಪುರದ ಜನತೆಗೆ ತಲುಪಿಸುತ್ತಿರುವುದಾಗಿ ಹೇಳಿದೆ.
ನೂತನ ಶಾಖೆಯ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಿಂದ ಕಳೆಗಟ್ಟಿತ್ತು. ನಟಿ ಮತ್ತು ರೂಪದರ್ಶಿ ರಾಗಿಣಿ ದ್ವಿವೇದಿ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಅತಿಥಿಗಳಾಗಿ ಬ್ರ್ಯಾಂಡ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣ್ ವೇಲ್ ಜೆ ಹಾಗೂ ಫ್ರಾಂಚೈಸಿ ಪಾಲುದಾರರಾದ ಡಾ. ಆರ್. ಸಂತೋಷ್ ಕುಮಾರ್ ಅವರು ಉಪಸ್ಥಿತರಿದ್ದರು.
ಈ ಕ್ಲಿನಿಕ್, ಸೌಂದರ್ಯ ವೈದ್ಯಕೀಯ ಕ್ಷೇತ್ರದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾಳಜಿಯುಕ್ತ ಸೇವೆಯನ್ನು ಒದಗಿಸಲಿದೆ. ಇಲ್ಲಿ, ಪರ್ಕ್ಯುಟೇನಿಯಸ್ ಎಫ್ಯುಇ ಹೇರ್ ಟ್ರಾನ್ಸ್ಪ್ಲಾಂಟ್, ಸ್ಟೆಮ್ ಎಕ್ಸ್ 27 ಪ್ರೊ™ (ಪಿಆರ್ಪಿ ಪ್ರೊ+), ಲೇಸರ್ ಹೇರ್ ಥೆರಪಿ, ರೀಜೆನ್ ಪ್ರೊ 9™ ಸೇರಿದಂತೆ ಯುಎಸ್-ಎಫ್ಡಿಎ ಅನುಮೋದಿತ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ.
ಅದೇ ರೀತಿ, ಕಾಂತಿಯುತ ಮತ್ತು ಯೌವ್ವನಭರಿತ ತ್ವಚೆಗಾಗಿ ಗ್ಲುಟಾಥಿಯೋನ್ ಐವಿ, ಹೈಡ್ರಾಫೇಶಿಯಲ್, ಕ್ಯೂ ಸ್ವಿಚ್ಡ್ ಲೇಸರ್, ಬೊಟೊಕ್ಸ್, ಫಿಲ್ಲರ್ಸ್, ಥ್ರೆಡ್ ಲಿಫ್ಟ್ ಮತ್ತು ಫುಲ್ ಬಾಡಿ ಲೇಸರ್ನಂಥ ಕ್ರಾಂತಿಕಾರಕಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ. ಈ ಎಲ್ಲಾ ಚಿಕಿತ್ಸೆಗಳನ್ನು ನುರಿತ ಸೌಂದರ್ಯ ತಜ್ಞರ ತಂಡವು ನಿಖರತೆಯೊಂದಿಗೆ ನಿರ್ವಹಿಸಲಿದ್ದು, ಪರಿವರ್ತನಾತ್ಮಕ ಫಲಿತಾಂಶ ಗಳ ಮೂಲಕ ಸೌಂದರ್ಯ ಕ್ಷೇಮ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
‘ಒನ್ಪ್ರೊ ‘ ಉತ್ಪನ್ನ ಮತ್ತು ಉಪಕರಣಗಳು
ಕ್ಲಿನಿಕ್ನಲ್ಲಿ ತನ್ನದೇ ಆದ ‘ಒನ್ಪ್ರೊ’ (OnePro) ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಕ್ಲಿನಿಕ್ನಲ್ಲಿ ಪಡೆಯುವ ಚಿಕಿತ್ಸೆಯ ಫಲಿತಾಂಶಗಳನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಲು ಈ ಉತ್ಪನ್ನಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ಕ್ಲಿನಿಕ್ಗಳಲ್ಲಿ ಬಳಸುವ ಎಲ್ಲಾ ಅತ್ಯಾಧುನಿಕ ಉಪಕರಣಗಳು ಕೂಡ ‘ಒನ್ಪ್ರೊ’ದ ‘ಅಡ್ವಾನ್ಸ್ಡ್ ಇಕ್ವಿಪ್ಮೆಂಟ್’ ಶ್ರೇಣಿಯದ್ದಾಗಿದ್ದು, ಇದು ಸಂಸ್ಥೆಯು ಗುಣಮಟ್ಟ ಹಾಗೂ ಸಮಗ್ರ ಆರೋಗ್ಯ ಸೇವೆಗಳಿಗೆ ನೀಡುವ ಆದ್ಯತೆಯನ್ನು ಒತ್ತಿಹೇಳುತ್ತದೆ.
ದೇಶದ ಜನತೆಗೆ ಸುಲಭಲಭ್ಯ ಸೌಂದರ್ಯ ಸೇವೆ
ಸರ್ಜಾಪುರದಲ್ಲಿ ಕ್ಲಿನಿಕ್ನಲ್ಲಿ ಆರಂಭವು ಕೇವಲ ವಿಸ್ತರಣೆಯಲ್ಲ. ಬದಲಾಗಿ, ಶ್ರೇಷ್ಠ ಆರೈಕೆ ಮತ್ತು ಅತ್ಯುತ್ತಮ ಫಲಿತಾಂಶಗಳ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಸಬಲೀಕರಣಗೊಳಿಸುವ ಬದ್ಧತೆಯಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಹೊಸ ಸೌಲಭ್ಯದ ಮೂಲಕ, ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ಉನ್ನತ ಗುಣಮಟ್ಟದ ಸೌಂದರ್ಯ ಕ್ಷೇಮ ಪರಿಹಾರಗಳನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ತನ್ನ ಧ್ಯೇಯವನ್ನು ಮುಂದುವರಿಸಿದೆ.
ಪರಿವರ್ತನೆಯ ಅನುಭವಕ್ಕೆ ಆಹ್ವಾನ
“ನಾವೀನ್ಯತೆ ಮತ್ತು ಆರೈಕೆಯು ಒಂದಾಗುವ, ವಿಜ್ಞಾನದ ಮೂಲಕ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅತ್ಯುತ್ತಮ ರೂಪವನ್ನು ಕಾಣಲು ಮತ್ತು ಅನುಭವಿಸಲು ಸಶಕ್ತರಾಗುವ ಜಗತ್ತಿಗೆ ಸರ್ಜಾಪುರದ ಜನರು ಹೆಜ್ಜೆ ಇಡಬಹುದಾಗಿದೆ. ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ಸೌಂದರ್ಯ ಕ್ಷೇಮ ಕ್ಷೇತ್ರದಲ್ಲಿ ಏಕೆ ವಿಶ್ವಾಸಾರ್ಹ ನಾಯಕ ಎಂಬುದನ್ನು ನಮ್ಮ ನೂತನ ಶಾಖೆಯಲ್ಲಿ ಸಾರ್ವಜನಿಕರು ಸ್ವತಃ ಅನುಭವಿಸಬಹುದು,” ಎಂದು ಸಂಸ್ಥೆಯು ತಿಳಿಸಿದೆ.
‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ಕುರಿತು
‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ಸಂಸ್ಥೆಯು ಕೇಶ ಪುನಶ್ಚೇತನ ಮತ್ತು ತ್ವಚೆ ಚಿಕಿತ್ಸಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಈ ಸಂಸ್ಥೆಯು ತನ್ನ ಶ್ರೇಷ್ಠತೆ, ನಾವೀನ್ಯತೆ, ಮತ್ತು ಸುಲಭಲಭ್ಯತೆಯ ಬದ್ಧತೆಗೆ ಹೆಸರುವಾಸಿಯಾಗಿದೆ. ಯುಎಸ್-ಎಫ್ಡಿಎ ಅನುಮೋದಿತ ಪರಿಹಾರಗಳು ಮತ್ತು ಅಪ್ರತಿಮ ಫಲಿತಾಂಶಗಳನ್ನು ಸಾಧಿಸುವತ್ತ ಗಮನಹರಿಸುವ ಮೂಲಕ, ಈ ಕ್ಲಿನಿಕ್ ಸೌಂದರ್ಯ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ವಿಶ್ವಾಸಾರ್ಹ ಹೆಸರಾಗಿ ಸ್ಥಾಪಿತವಾಗಿದೆ. ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ಅಧಿಕೃತ ಜಾಲತಾಣಗಳಾದ www.adgrohair.com ಹಾಗೂ www.adgloskin.com ನಲ್ಲಿ ಪಡೆಯಬಹುದು.








